Asianet Suvarna News Asianet Suvarna News

ಬೆಂಗಳೂರಲ್ಲಿ ಏಷ್ಯಾ ಬಾಸ್ಕೆಟ್‌ಬಾಲ್‌ ಟೂರ್ನಿಗೆ ಕ್ಷಣಗಣನೆ

ಫಿಬಾ ಮಹಿಳಾ ಏಷ್ಯಾ ಕಪ್‌ ಡಿವಿಜನ್‌ ‘ಎ’ ಬಾಸ್ಕೆಟ್‌ಬಾಲ್‌ ಪಂದ್ಯಾವಳಿಗೆ ಬೆಂಗಳೂರಿನ ಕಂಠೀವರ ಕ್ರೀಡಾಂಗಣ ಸಜ್ಜಾಗಿದೆ. ಭಾರತ ತಂಡವನ್ನು ರಾಜಪ್ರಿಯದರ್ಶಿನಿ ಮುನ್ನಡೆಸಲಿದ್ದು, ಕರ್ನಾಟಕದ ಲೋಪಮುದ್ರಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

FIBA Asia Cup 2019 Rajapriyadarshini Lead Indian Team
Author
Bengaluru, First Published Sep 23, 2019, 12:58 PM IST

ಬೆಂಗಳೂರು[ಸೆ.23]: ಸೆ. 24 ರಿಂದ 29 ರವರೆಗೆ ಇಲ್ಲಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಫಿಬಾ ಮಹಿಳಾ ಏಷ್ಯಾ ಕಪ್‌ ಡಿವಿಜನ್‌ ‘ಎ’ ಬಾಸ್ಕೆಟ್‌ಬಾಲ್‌ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.  ರಾಜಪ್ರಿಯದರ್ಶಿನಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. 

ಕಾಶ್ಮೀರ ಆಟಗಾರ್ತಿ ಹುಡುಕಿಕೊಟ್ಟ ಭಾರತೀಯ ಸೇನೆ!

2020ರ ಟೋಕಿಯೋ ಒಲಿಂಪಿಕ್ಸ್‌, ಫಿಬಾ ಏಷ್ಯಾ ಮತ್ತು ಫಿಬಾ ಒಷಿಯಾನಿಯ ತಂಡಗಳ ಅರ್ಹತಾ ಸುತ್ತು ಇದಾಗಿದೆ. ಸೆ. 24ರಂದು ನಡೆಯುವ ಮೊದಲ ಪಂದ್ಯದಲ್ಲಿ ಆಸ್ಪ್ರೇಲಿಯಾ, ಫಿಲಿಪೈನ್ಸ್‌ ವಿರು​ದ್ಧ ಸೆಣಸಲಿದೆ. ಆತಿಥೇಯ ಭಾರತ, ಹಾಲಿ ಚಾಂಪಿಯನ್‌ ಜಪಾನ್‌ ತಂಡವನ್ನು ಎದುರಿಸಲಿದೆ. 

ಟೂರ್ನಿಯಲ್ಲಿ 8 ರಾಷ್ಟ್ರಗಳು ಭಾಗವಹಿಸುತ್ತಿದ್ದು, 2 ವಿಭಾಗಗಳಾಗಿ ವಿಂಗಡಿಸಲಾಗಿದೆ. ‘ಎ’ ಗುಂಪಿನಲ್ಲಿ ಜಪಾನ್‌, ದ.ಕೊರಿಯಾ, ಚೈನೀಸ್‌ ತೈಪೆ ಮತ್ತು ಭಾರತ ತಂಡಳಿದ್ದರೆ, ‘ಬಿ’ ಗುಂಪಿನಲ್ಲಿ ಆಸ್ಪ್ರೇಲಿಯಾ, ಚೀನಾ, ನ್ಯೂಜಿಲೆಂಡ್‌, ಫಿಲಿಪೈನ್ಸ್‌ ತಂಡಗಳಿವೆ. ಭಾರತ ತಂಡದಲ್ಲಿ ಕರ್ನಾಟಕದ ಲೋಪಮುದ್ರಾ ಸ್ಥಾನ ಪಡೆದಿದ್ದಾರೆ.
 

Follow Us:
Download App:
  • android
  • ios