ಒಂದೇ ಟೂರ್ನಿಯಲ್ಲಿ 10 ಗ್ರ್ಯಾಂಡ್'ಸ್ಲಾಂ ಗೆದ್ದ ಜಗತ್ತಿನ ಏಕೈಕ ಆಟಗಾರ ಎನ್ನುವ ದಾಖಲೆಗೆ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್ ಭಾಜನರಾಗಿದ್ದಾರೆ.
ಪ್ಯಾರೀಸ್(ಜೂ.13): ಫ್ರೆಂಚ್ ಓಪನ್‌ನಲ್ಲಿ ದಾಖಲೆಯ 10ನೇ ಬಾರಿಗೆ ಪ್ರಶಸ್ತಿ ಗೆದ್ದ ಸ್ಪೇನ್'ನ ರಾಫೆಲ್ ನಡಾಲ್ ಅವರನ್ನು 18 ಗ್ರ್ಯಾಂಡ್'ಸ್ಲಾಂಗಳ ಒಡೆಯ ರೋಜರ್ ಫೆಡರರ್ ಅಭಿನಂದಿಸಿದ್ದಾರೆ.
ಫೈನಲ್'ನಲ್ಲಿ ವಾವ್ರಿಂಕಾ ಎದುರು ಗೆಲುವು ಸಾಧಿಸಿದ ನಡಾಲ್ ಇತಿಹಾಸ ನಿರ್ಮಿಸಿದ್ದ ಸಾಂಪ್ರದಾಯಿಕ ಎದುರಾಳಿ ಹಾಗೂ ನೆಚ್ಚಿನ ಸ್ನೇಹಿತನನ್ನು ಫೆಡರರ್ ಮನಸಾರೆ ಕೊಂಡಾಡಿದ್ದಾರೆ.
ಟ್ವಿಟರ್'ನಲ್ಲಿ ಫೆಡರರ್ ‘ನಿಸ್ಸಂದೇಹವಾಗಿ ಇದು ಟೆನಿಸ್'ನ ಅತಿದೊಡ್ಡ ಸಾಧನೆ' ಎಂದು ನಡಾಲ್ ದಾಖಲೆಯನ್ನು ಬಣ್ಣಿಸಿದ್ದಾರೆ. ಇನ್ನು ನಡಾಲ್ ತಮ್ಮ ಗೆಲುವನ್ನು ತಮ್ಮ ಕೋಚ್ ಟೋನಿ ನಡಾಲ್‌ಗೆ ಅರ್ಪಿಸಿದ್ದಾರೆ.
ಒಂದೇ ಟೂರ್ನಿಯಲ್ಲಿ 10 ಗ್ರ್ಯಾಂಡ್'ಸ್ಲಾಂ ಗೆದ್ದ ಜಗತ್ತಿನ ಏಕೈಕ ಆಟಗಾರ ಎನ್ನುವ ದಾಖಲೆಗೆ ಕಿಂಗ್ ಆಫ್ ಕ್ಲೇ ಕೋರ್ಟ್ ಖ್ಯಾತಿಯ ನಡಾಲ್ ಭಾಜನರಾಗಿದ್ದಾರೆ.