ಅತಿಯಾದರೆ ಅಮೃತವೂ ವಿಷ ಎನ್ನುವುದು ಇದೀಗ ಮತ್ತೊಮ್ಮೆ ಸಾಬೀತಾಗಿದೆ. ಈಗಾಗಲೇ ಅತಿವೇಗವಾಗಿ ಕಾರು ಓಡಿಸಿ ವಿಶ್ವದಾಖಲೆ ಬರೆದಿದ್ದ ಅಮೆರಿಕದ ಜೆಸ್ಸಿ ಕೋಂಬ್ಸ್ ತಮ್ಮದೇ ದಾಖಲೆ ಮುರಿಯಲು ಹೋಗಿ ಜೀವ ಕಳೆದುಕೊಂಡಿದ್ದಾರೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

ನವದೆಹಲಿ[ಆ.30]: ಅತಿವೇಗದ ಮಹಿಳೆಯೆಂದೇ ಕರೆಯಲ್ಪಡುವ 36 ವರ್ಷ ವಯಸ್ಸಿನ ಅಮೆರಿಕದ ಜೆಟ್ ಕಾರು ಚಾಲಕಿ ಜೆಸ್ಸಿ ಕೋಂಬ್ಸ್ ಗುರುವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿದ್ದಾರೆ. 

ಬೈಕ್ ರೈಡರ್‌ಗಳಿಗೆ ಬಂದಿದೆ ರೆಕಿ ಆ್ಯಪ್; ವಿಶ್ವದಲ್ಲೇ ಮೊದಲು!

ಗಂಟೆಗೆ 823 ಕಿ.ಮೀ ವೇಗದಲ್ಲಿ ಜೆಟ್ ಕಾರು ಓಡಿಸುವ ಮೂಲಕ ಹೊಸ ದಾಖಲೆ ಬರೆಯಲು ಹೊರಟಿದ್ದ ಜೆಸ್ಸಿ ಅಪಘಾತಕ್ಕೆ ಬಲಿಯಾಗಿದ್ದಾರೆ. 2013ರಲ್ಲಿ ಗಂಟೆಗೆ 640 ಕಿ.ಮೀ ವೇಗದಲ್ಲಿ ಜೆಟ್ ಕಾರು ಓಡಿಸಿ ಅತಿವೇಗದ ಮಹಿಳೆ ಎಂಬ ದಾಖಲೆ ಬರೆದಿದ್ದರು. ಇದಾದ ಕೆಲ ದಿನಗಳ ಬಳಿಕ ಜೆಸ್ಸಿ 777 ಕಿ.ಮೀ. ವೇಗದಲ್ಲಿ ಜೆಟ್ ಕಾರು ಓಡಿಸಿದ್ದರು. ಆದರೆ ತಾಂತ್ರಿಕ ಕಾರಣಗಳಿಂದ ಇದನ್ನು ಪರಿಗಣಿಸಿರಲಿಲ್ಲ.

ಕಾರು ಡ್ರೈವಿಂಗ್ ವೇಳೆ ಗಮನದಲ್ಲಿರಲಿ 5 ಅಂಶ - ನಿರ್ಲಕ್ಷ್ಯಿಸಿದರೆ ಅಪಾಯ!

Scroll to load tweet…

ಸಂತಾಪ: ಜೆಸ್ಸಿ ಕೋಂಬ್ಸ್ ನಿಧನಕ್ಕೆ ಸಹಪಾಠಿ ಟೆರ್ರಿ ಮ್ಯಾಡನ್ ಕಂಬನಿ ಮಿಡಿದಿದ್ದಾರೆ. ದುರಾದೃಷ್ಟವಶಾತ್ ನಿನ್ನೆ ನಡೆದ ಭೀಕರ ಅಪಘಾತದಲ್ಲಿ ನಾವು ಜೆಸ್ಸಿ ಕಳೆದುಕೊಂಡೆವು. ಆಕೆಯನ್ನು ಉಳಿಸಿಕೊಳ್ಳಲು ಶಕ್ತಿ ಮೀರಿ ಪ್ರಯತ್ನಿಸಿದೆವು. ಆದರೆ ಆಕೆಯನ್ನು ಉಳಿಸಿಕೊಳ್ಳಲಾಗಲಿಲ್ಲ ಎಂದು ಇನ್’ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

View post on Instagram

ಯಾರು ಜೆಸ್ಸಿ ಕೋಂಬ್..?

1980ರಲ್ಲಿ ಅಮೆರಿಕದ ಸೌತ್ ಡಕೋಟಾದಲ್ಲಿ ಜನಿಸಿದ ಜೆಸ್ಸಿ ಕೋಂಬ್, ಚಿಕ್ಕ ವಯಸ್ಸಿನಲ್ಲೇ ಕಾರು ಓಡಿಸುವ ಕ್ರೇಜ್ ಬೆಳೆಸಿಕೊಂಡರು. ಇದಕ್ಕೆ ಕುಟುಂಬದಿಂದ ಪ್ರೋತ್ಸಾಹ ಕೂಡಾ ದೊರೆಯಿತು. 

ವ್ಯಾಮಿಂಗ್ಸ್ ವ್ಯಾ ಟೆಕ್ ಕಾಲೇಜಿನಲ್ಲಿ ಕಸ್ಟಮ್ ಆಟೋಮ್ಯಾಟಿಕ್ ಫ್ಯಾಬ್ರಿಕೇಶನ್ ವಿಷಯದಲ್ಲಿ ಪದವಿಯಲ್ಲಿ ಗರಿಷ್ಠ ಅಂಕ ಪಡೆದು ಉತ್ತೀರ್ಣರಾದರು. ಇದರ ಜತೆ ಕೆಲಕಾಲ ಟಿವಿ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿಯೂ ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ನಾರ್ತ್ ಅಮೆರಿಕನ್ ಈಗಲ್ ಸೂಪರ್ ಸಾನಿಕ್ ಸ್ಪೀಡ್ ಚಾಲೆಂಜರ್ ಟೀಂ ಸೇರಿದ ಕೋಬ್ಸ್ ಅತಿವೇಗವಾಗಿ ಕಾರು ಓಡಿಸುವ ಮೂಲಕ ದಾಖಲೆ ಬರೆದಿದ್ದರು.