ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಸಂಸ್ಥಾಪಕ ದಿನಾಚರಣೆಗೆ ಸಜ್ಜಾಗಿದೆ. ಆಗಸ್ಟ್ 1 ರಂದು ಸಮಾರಂಭ ಆಯೋಜಿಸಲಾಗಿದೆ. ಆದರೆ ಸಮಾರಂಭವನ್ನು ಬಹಿಷ್ಕರಿಸುವಂತೆ, ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್‌ಗೆ ಅಭಿಮಾನಿಗಳು ಮನವಿ ಮಾಡಿದ್ದಾರೆ.

ಕೋಲ್ಕತಾ(ಜು.31): ಭಾರತದ ಅತ್ಯಂತ ಹಳೇ ಫುಟ್ಬಾಲ್ ಕ್ಲಬ್ ಅನ್ನೋ ಹೆಗ್ಗಳಿಕೆಗೆ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಪಾತ್ರವಾಗಿದೆ. ಆಗಸ್ಟ್ 1, 1920ರಲ್ಲಿ ಆರಂಭಗೊಂಡ ಕ್ಲಬ್, ಈ ವರ್ಷ ಸಂಸ್ಥಾಪಕ ದಿನವನ್ನು ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಮ್ಯಾನೇಜ್ಮೆಂಟ್ ಆಟಗಾರರನ್ನು ನಡೆಸಿಕೊಂಡ ರೀತಿಗೂ ಅಭಿಮಾನಿಗಳಲ್ಲಿ ಬೇಸರವಿದೆ. ಹೀಗಾಗಿ ಸಂಸ್ಥಾಪಕ ದಿನಚಾರಣೆಯಲ್ಲಿ ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಭಾಗವಹಿಸಬಾರದು ಎಂದು ಅಭಿಮಾನಿಗಳು ಮನವಿ ಮಾಡಿದ್ದಾರೆ.

ಈಸ್ಟ್ ಬೆಂಗಾಲ್ ಫುಟ್ಬಾಲ್ ಕ್ಲಬ್ ಸಂಸ್ಥಾಪಕ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಕಪಿಎಲ್ ದೇವ್‌ಗೆ ಆಹ್ವಾನ ನೀಡಲಾಗಿದೆ. ಇತ್ತ ಕಪಿಲ್ ಕೂಡ ಪ್ರತಿಷ್ಠಿತ ಕ್ಲಬ್ ದಿನಾಚರಣೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದಾರೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಸಮಾರಂಭವನ್ನೂ ಬಹಿಷ್ಕರಿಸುವಂತೆ ಅಭಿಮಾನಿಗಳು ಆಗ್ರಹಿಸಿದ್ದಾರೆ. ಕಪಿಲ್ ದೇವ್ ಬಾಯ್‌ಕಾಟ್ ಈಸ್ಟ್ ಬೆಂಗಾಲ್ ಎಂಬ ಅಭಿಯಾನ ಆರಂಭಿಸಿದ್ದಾರೆ.

Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…
Scroll to load tweet…