ಹೈದರಾಬಾದ್(ಆ.30): ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗಲಿಲ್ಲ ಅನ್ನೋ ಕಾರಣಕ್ಕೆ ಆತುರದಿಂದ ವಿದಾಯ ಹೇಳಿದ್ದ ಮಧ್ಯಮ ಕ್ರಮಾಂಕ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಇದೀಗ ನಿರ್ಧಾರ ಬದಲಿಸಿದ್ದಾರೆ. 58 ದಿನಗಳ ಬಳಿಕ ರಾಯುಡು ವಿದಾಯ ನಿರ್ಧಾರದಿಂದ ಹೊರಬಂದಿದ್ದೇನೆ. ನಿಗದಿತ ಓವರ್ ಕ್ರಿಕೆಟ್ ಆಯ್ಕೆಗೆ ಲಭ್ಯವಿದ್ದೇನೆ ಎಂದು ಹೈದರಾಬಾದ್ ಕ್ರಿಕೆಟ್ ಸಂಸ್ಛೆಗೆ ರಾಯುಡು ಪತ್ರ ಬರೆದಿದ್ದಾರೆ. ರಾಯುಡು ನಿರ್ಧಾರ ಬದಲಿಸುತ್ತಿದ್ದಂತೆ ಮತ್ತೆ ಟ್ರೋಲ್ ಆಗಿದ್ದಾರೆ. ರಾಯುಡು ಭಾರತದ ಶಾಹಿದ್ ಆಫ್ರಿದಿ ಎಂದು ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ.