ಮಾಸ್ಕೋ(ಅ.07): ರಷ್ಯಾದ ಸ್ಟಾರ್‌ ಆಟಗಾರ್ತಿ ಮರಿಯಾ ಶರಪೋವಾ ಮುಂದಿನ ಫ್ರೆಂಚ್‌ ಓಪನ್‌ ಟೆನಿಸ್‌ ಟೂರ್ನಿಯಲ್ಲಿ ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆಯಲಿದ್ದಾರೆ.

ಟೂರ್ನಿ ಆರಂಭಕ್ಕೆ 15 ದಿನಗಳು ಇದ್ದಾಗ ವೈಲ್ಡ್‌ ಕಾರ್ಡ್‌ ಪ್ರವೇಶಾತಿ ಪಡೆಯುವ ಆಟಗಾರರ ಪಟ್ಟಿಯನ್ನು ರಚಿಸಲಾಗುತ್ತದೆ. ಉದ್ದೀಪನಾ ಮದ್ದು ಸೇವನೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ರಷ್ಯಾದ ಆಟಗಾರ್ತಿ, ಕೆಲ ದಿನಗಳ ಹಿಂದಷ್ಟೇ ತಮ್ಮ ಶಿಕ್ಷೆಯ ಪ್ರಮಾಣವನ್ನು 2 ವರ್ಷದಿಂದ 15 ತಿಂಗಳಿಗೆ ಇಳಿಸಿಕೊಂಡಿದ್ದರು. ಶರಪೋವಾ ಮುಂದಿನ ವರ್ಷ ಏಪ್ರಿಲ್‌ 26ರಿಂದ ಟೆನಿಸ್‌ ಅಂಗಣಕ್ಕಿಳಿಯಲು ಮುಕ್ತರಾಗಿದ್ದಾರೆ.

ಇನ್ನು ಫ್ರೆಂಚ್‌ ಓಪನ್‌ ಟೂರ್ನಿ ಮೇ 22 ರಿಂದ ಜೂನ್‌ 11ರ ವರೆಗೆ ನಡೆಯಲಿದೆ.