15 ತಿಂಗಳ ನಿಷೇಧದ ಬಳಿಕ ಟೆನಿಸ್‌'ಗೆ ವಾಪಸ್ಸಾದ ಶರಪೋವಾ ಅವರನ್ನು ಮೋಸಗಾರ್ತಿ ಎಂದಿದ್ದ ಬುಷಾರ್ಡ್, ಅವರಿಗೆ ಮತ್ತೊಂದು ಅವಕಾಶ ನೀಡಿದ್ದನ್ನು ಟೀಕಿಸಿದ್ದರು.

ಮ್ಯಾಡ್ರಿಡ್(ಮೇ.09): ಮರಿಯಾ ಶರಪೋವಾ ಅವರನ್ನು ಮೋಸಗಾರ್ತಿ ಎಂದು ಕರೆದು ಸಂಚಲನ ಮೂಡಿಸಿದ್ದ ಕೆನಡಾದ ಎಜಿನಿ ಬುಷಾರ್ಡ್, ಮ್ಯಾಡ್ರಿಡ್ ಓಪನ್‌'ನ ದ್ವಿತೀಯ ಸುತ್ತಿನಲ್ಲಿ ರೋಮಾಂಚನಕಾರಿ ಆಟವಾಡಿ ರಷ್ಯಾ ಆಟಗಾರ್ತಿಯನ್ನು ಮಣಿಸಿದ್ದಾರೆ.

7-5,2-6,6-4 ಸೆಟ್‌'ಗಳಲ್ಲಿ ಗೆಲುವು ಸಾಧಿಸಿದ ಬುಷಾರ್ಡ್, ಪ್ರೀ-ಕ್ವಾರ್ಟರ್ ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

15 ತಿಂಗಳ ನಿಷೇಧದ ಬಳಿಕ ಟೆನಿಸ್‌'ಗೆ ವಾಪಸ್ಸಾದ ಶರಪೋವಾ ಅವರನ್ನು ಮೋಸಗಾರ್ತಿ ಎಂದಿದ್ದ ಬುಷಾರ್ಡ್, ಅವರಿಗೆ ಮತ್ತೊಂದು ಅವಕಾಶ ನೀಡಿದ್ದನ್ನು ಟೀಕಿಸಿದ್ದರು.

ಟೆನಿಸ್ ಲೋಕದಲ್ಲಿ ಕೆನಡಾ ಆಟಗಾರ್ತಿ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿತ್ತು.