44ನೇ ನಿಮಿಷದಲ್ಲಿ ರಿಯಾನ್ ಬ್ರೆವೆಸ್ಟರ್, 58ನೇ ನಿಮಿಷದಲ್ಲಿ ಮಾರ್ಗನ್ ಗಿಬ್ಸ್, . 69ನೇ ಮತ್ತು 88ನೇ ನಿಮಿಷದಲ್ಲಿ ಫಾರ್ಡನ್ ಮತ್ತು 84ನೇ ನಿಮಿಷದಲ್ಲಿ ಮಾರ್ಕ್ ಗೋಲು ಗಳಿಸುವ ಮೂಲಕ ಗೆಲುವಿನ ಇತಿಹಾಸ ಬರೆದರು.
ಕೋಲ್ಕತ್ತಾ(ಅ.28): ಪ್ರಬಲ ಸ್ಪೇನ್ ತಂಡವನ್ನು 5-2 ಗೋಲುಗಳ ಅಂತರದಲ್ಲಿ ಸೋಲಿಸುವ ಮೂಲಕ ಇಂಗ್ಲೆಂಡ್ ಇದೇ ಮೊದಲ ಬಾರಿಗೆ ಚೊಚ್ಚಲ ಫಿಫಾ ಅಂಡರ್ 17 ವಿಶ್ವಕಪ್ ಗೆಲುವು ಸಾಧಿಸಿದೆ.
ಕೋಲ್ಕತ್ತಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದ್ಭುತ ಆಟದ ಮೂಲಕ ಬಲಿಷ್ಟ ಸ್ಪೇನ್ ತಂಡವನ್ನು ಸದೆಬಡೆದರು. ಈ ಗೆಲುವಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ 60,000ಕ್ಕೂ ಹೆಚ್ಚು ಪ್ರೇಕ್ಷಕರು ಸಾಕ್ಷಿಯಾದರು. ಪಂದ್ಯದ ಮೊದಲಾರ್ಧದಲ್ಲಿ 2-1 ಗೋಲುಗಳ ಹಿನ್ನಡೆ ಅನುಭವಿಸಿದ್ದರು ಇಂಗ್ಲೆಂಡ್. ಆದರೆ ದ್ವಿತೀಯಾರ್ಧದಲ್ಲಿ ಆವರ ಆಟ ರೋಚಕವಾಗಿತ್ತು.
ಅತ್ಯುತ್ತಮ ಆಟ
44ನೇ ನಿಮಿಷದಲ್ಲಿ ರಿಯಾನ್ ಬ್ರೆವೆಸ್ಟರ್, 58ನೇ ನಿಮಿಷದಲ್ಲಿ ಮಾರ್ಗನ್ ಗಿಬ್ಸ್, . 69ನೇ ಮತ್ತು 88ನೇ ನಿಮಿಷದಲ್ಲಿ ಫಾರ್ಡನ್ ಮತ್ತು 84ನೇ ನಿಮಿಷದಲ್ಲಿ ಮಾರ್ಕ್ ಗೋಲು ಗಳಿಸುವ ಮೂಲಕ ಗೆಲುವಿನ ಇತಿಹಾಸ ಬರೆದರು.
ಸ್ಪೇನ್ ಪರ 10 ಹಾಗೂ 31ನೇ ನಿಮಿಷದಲ್ಲೇ ಸರ್ಜಿಯೊ ಗೊಮೆಜ್ ಗೋಲು ಬಾರಿಸುವ ಮೂಲಕ ಭರವಸೆ ಮೂಡಿಸದಾದರೂ ಅನಂತರ ಇಂಗ್ಲೆಂಡ್ ಆಟಗಾರರ ಅತ್ಯುತ್ತಮ ಆಟದ ಮುಂದೆ ಮಂಕಾದರು. ಭಾರತದಲ್ಲಿ ಆಯೋಜನೆಯಾಗಿರುವ ಫಿಫಾ ಅಂಡರ್ 17ಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದೆ. ಭಾರತ ಮೂರು ಪಂದ್ಯಗಳನ್ನು ಸೋತು ಲೀಗ್ ಹಂತದಲ್ಲೇ ಹೊರಬಿದ್ದರೂ ಉತ್ತಮ ಪ್ರದರ್ಶನ ನೀಡಿದೆ.