ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುಂಚೆ ಇಂಗ್ಲೆಂಡ್ ತಂಡ ಯಾವುದೇ ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಆದರೆ, ಮುಂಬೈನಲ್ಲಿ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲಿರುವ ಕುಕ್ ಬಳಗ, ನ.5ರಂದು ರಾಜ್‌ಕೋಟ್‌ಗೆ ತೆರಳಲಿದೆ.

ಮುಂಬೈ(ನ.02): ಭಾರತ ವಿರುದ್ಧದ ಐದು ಟೆಸ್ಟ್ ಪಂದ್ಯ ಸರಣಿಯಲ್ಲದೆ, ಆನಂತರದ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗವಹಿಸಲು ಅಲೆಸ್ಟೈರ್ ಕುಕ್ ಸಾರಥ್ಯದ ಇಂಗ್ಲೆಂಡ್ ತಂಡ ಇಂದು ನಗರಕ್ಕೆ ಆಗಮಿಸಿತು.

ರಾಜ್‌ಕೋಟ್‌ನಲ್ಲಿ ಆರಂಭವಾಗಲಿರುವ ಮೊದಲ ಟೆಸ್ಟ್ ಪಂದ್ಯಕ್ಕೂ ಮುಂಚೆ ಇಂಗ್ಲೆಂಡ್ ತಂಡ ಯಾವುದೇ ಅಭ್ಯಾಸ ಪಂದ್ಯವನ್ನು ಆಡುತ್ತಿಲ್ಲ. ಆದರೆ, ಮುಂಬೈನಲ್ಲಿ ಅಭ್ಯಾಸ ಶಿಬಿರದಲ್ಲಿ ಭಾಗವಹಿಸಲಿರುವ ಕುಕ್ ಬಳಗ, ನ.5ರಂದು ರಾಜ್‌ಕೋಟ್‌ಗೆ ತೆರಳಲಿದೆ.

2011-12ನೇ ಸಾಲಿನಲ್ಲಿ ಭಾರತ ಪ್ರವಾಸ ಕೈಗೊಂಡಿದ್ದ ಇದೇ ಕುಕ್ ಪಡೆ ಭಾರತದ ವಿರುದ್ಧದ ನಾಲ್ಕು ಟೆಸ್ಟ್ ಪಂದ್ಯ ಸರಣಿಯನ್ನು 2-1ರಿಂದ ಜಯಿಸಿತ್ತು. ಆಗಿನ ವಿಜೇತ ತಂಡದ ನಾಯಕ ಇದೇ ಕುಕ್ ಆಗಿದ್ದುದು ವಿಶೇಷ.

ಅಂದಹಾಗೆ ಇತ್ತೀಚೆಗಷ್ಟೇ ಬಾಂಗ್ಲಾದೇಶ ಪ್ರವಾಸ ಮುಗಿಸಿ ಬಂದ ಇದೇ ಕುಕ್ ಪಡೆ ಎರಡು ಪಂದ್ಯ ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಂಡಿದೆ.

ಇಂಗ್ಲೆಂಡ್ ತಂಡ ಇಂತಿದೆ

ಅಲೆಸ್ಟೈರ್ ಕುಕ್ (ನಾಯಕ), ಜೋ ರೂಟ್, ಮೊಯೀನ್ ಅಲಿ, ಜಾರ್ ಅನ್ಸಾರಿ, ಜಾನಿ ಬೇರ್‌ಸ್ಟೋ (ವಿಕೆಟ್‌ಕೀಪರ್), ಜೇಕ್ ಬಾಲ್, ಗ್ಯಾರಿ ಬ್ಯಾಲೆನ್ಸ್, ಗರೆತ್ ಬ್ಯಾಟಿ, ಸ್ಟುವರ್ಟ್ ಬ್ರಾಡ್, ಜೋಸ್ ಬಟ್ಲರ್, ಬೆನ್ ಡುಕೆಟ್, ಸ್ಟೀವ್ ಫಿನ್, ಎಚ್. ಹಮೀದ್, ಅದಿಲ್ ರಶೀದ್, ಬೆನ್ ಸ್ಟೋಕ್ಸ್ ಹಾಗೂ ಕ್ರಿಸ್ ವೋಕೆಸ್.