ಈಗಾಗಲೇ 3-1 ಸರಣಿ ಸೋತಿರುವ ಟೀಂ ಇಂಡಿಯಾ ಕೊನೆಯ ಟೆಸ್ಟ್ ನಲ್ಲಿ ಜಯಗಳಿಸಿ ಮಾನ ಉಳಿಸಿಕೊಳ್ಳ ಬೇಕಾದರೆ ನಾಲ್ಕನೆ ದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಬೇಗನೆ ಕಟ್ಟಿಹಾಕಬೇಕಾಗಿದೆ.
ಓವಲ್(ಸೆ.09): ಇಂಗ್ಲೆಂಡ್ ವಿರುದ್ದದ 5ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 40 ರನ್ ಮುನ್ನಡೆ ಪಡೆದಿರುವ ಇಂಗ್ಲೆಂಡ್ ತಂಡ ಮೂರನೇ ದಿನದಾಡದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸ್'ನಲ್ಲಿ43 ಓವರ್ ಗಳಲ್ಲಿ 2 ವಿಕೇಟ್ ನಷ್ಟಕ್ಕೆ 114 ರನ್ ಪೇರಿಸಿ 154 ರನ್ ಗಳ ಮುನ್ನಡೆ ಸಾಧಿಸಿದೆ.
2ನೇ ಇನ್ನಿಂಗ್ಸ್ ನ 13ನೇ ಓವರ್ ನಲ್ಲಿ ಕೆ. ಜೆನ್ನಿಂಗ್ಸ್ ಅವರನ್ನು ವೇಗದ ಬೌಲರ್ ಶಮಿ ಬೌಲ್ಡ್ ಮಾಡಿ ಪೆವಿಲಿಯನ್ ಗೆ ಕಳಿಸಿದರು. ಮೊದಲ ಕ್ರಮಾಂಕದ ಆಟಗಾರ ಮೋಯಿನ್ ಅಲಿ 27ನೇ ಓವರ್ ನಲ್ಲಿ ಸ್ಪಿನ್ನರ್ ರವೀಂದ್ರ ಜಡೇಜಾ ಅವರಿಗೆ ವಿಕೇಟ್ ಒಪ್ಪಿಸಿದರು. ದಿನದಾಂತ್ಯಕ್ಕೆ ಮುರಿಯದ ಮೂರನೇ ವಿಕೇಟಿಗೆ ಕುಕ್ [44] ಹಾಗೂ ನಾಯಕ ಜೆ. ರೂಟ್ [29] ಆಡುತ್ತಿದ್ದಾರೆ.
ಈಗಾಗಲೇ 3-1 ಸರಣಿ ಸೋತಿರುವ ಟೀಂ ಇಂಡಿಯಾ ಕೊನೆಯ ಟೆಸ್ಟ್ ನಲ್ಲಿ ಜಯಗಳಿಸಿ ಮಾನ ಉಳಿಸಿಕೊಳ್ಳ ಬೇಕಾದರೆ ನಾಲ್ಕನೆ ದಿನದಲ್ಲಿ ಇಂಗ್ಲೆಂಡ್ ಬ್ಯಾಟ್ಸ್ ಮೆನ್ ಗಳನ್ನು ಬೇಗನೆ ಕಟ್ಟಿಹಾಕಬೇಕಾಗಿದೆ.
ರವೀಂದ್ರ ಜಡೇಜಾ ಅಜೇಯ ಅರ್ಧ ಶತಕ
6 ವಿಕೆಟ್ ನಷ್ಟಕ್ಕೆ 174 ರನ್‌ಗಳೊಂದಿಗೆ ಮೂರನೇ ದಿನದಾಟ ಆರಂಭಿಸಿದ ಭಾರತ ಅತ್ಯುತ್ತಮ ಹೋರಾಟ ನೀಡಿತು. ರವೀಂದ್ರ ಜಡೇಜಾ[86*] ಹಾಗೂ ಹನುಮಾ ವಿಹಾರಿ[56] ಜೊತೆಯಾಟದಿಂದ ಟೀಂ ಇಂಡಿಯಾ ಚೇತರಿಸಿಕೊಂಡಿತು. ಚೊಚ್ಚಲ ಪಂದ್ಯವಾಡಿದ ಹನುಮಾ ವಿಹಾರಿ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಆದರೆ ವಿಹಾರಿ 56 ರನ್ ಸಿಡಿಸಿ ಔಟಾದರು. ಆದರೆ ರವೀಂದ್ರ ಜಡೇಜಾ ತಂಡದ ಬ್ಯಾಟಿಂಗ್ ಜವಾಬ್ದಾರಿ ನಿರ್ವಹಿಸಿದರು.
ಅಂತಿಮ ಹಂತದಲ್ಲಿ ಟೀಂ ಇಂಡಿಯಾ ಬಾಲಂಗೋಚಿಗಳ ಜೊತೆ ಬ್ಯಾಟ್ ಬೀಸಿದ ಜಡೇಜಾ ಅರ್ಧ ಶತಕ ಬಾರಿಸಿದರು. ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ ಹಾಗೂ ಜಸ್‌ಪ್ರೀತ್ ಬುಮ್ರಾ ಅವರೊಂದಿಗೆ ಇನ್ನಿಂಗ್ಸ್ ಕಟ್ಟಿದ ಜಡೇಜಾ 86 ರನ್ ಬಾರಿಸಿ ಅಜೇಯರಾಗುಳಿದರು.
ಸಂಕ್ಷಿಪ್ತ ಸ್ಕೋರ್:
ಇಂಗ್ಲೆಂಡ್: 332/10 ಹಾಗೂ 43 ಓವರ್ ಗಳಲ್ಲಿ 114
[ಕುಕ್ ಅಜೇಯ 46, ರೂಟ್ ಅಜೇಯ 29]
ಭಾರತ ಮೊದಲ ಇನ್ನಿಂಗ್ಸ್ 292/10
[ರವೀಂದ್ರ ಜಡೇಜಾ 86, ಹನುಮಾ 56, ಕೊಹ್ಲಿ 49 ]
[ಮೂರನೇ ದಿನದಾಂತ್ಯಕ್ಕೆ]
