ಗೆಲುವಿಗೆ ಪಾರ್ಥೀವ್ ಪಟೇಲ್ ಸಾರಥ್ಯದ ಪ.ವಲಯ ನೀಡಿದ್ದ 150 ರನ್ ಗುರಿಯನ್ನು ಪೂ. ವಲಯ 13.4 ಓವರ್‌'ಗಳಲ್ಲಿ ಕೇವಲ 2 ವಿಕೆಟ್‌'ಗೆ 153 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿತು.
ಮುಂಬೈ(ಫೆ.18): ಆರಂಭಿಕ ವಿರಾಟ್ ಸಿಂಗ್ (58) ಹಾಗೂ ಮೂರನೇ ಕ್ರಮಾಂಕದಲ್ಲಿ ಇಶಾಂತ್ ಜಗ್ಗಿ (56) ದಾಖಲಿಸಿದ ಸ್ಫೋಟಕ ಅರ್ಧಶತಕಗಳ ನೆರವಿನಿಂದ ಪ. ವಲಯವನ್ನು 8 ವಿಕೆಟ್ಗಳಿಂದ ಹಣಿದ ಪೂರ್ವ ವಲಯ ಆ ಮೂಲಕ ಸತತ ನಾಲ್ಕನೇ ಬಾರಿಗೆ ಸೈಯದ್ ಮುಷ್ತಾಕ್ ಅಲಿ ಟಿ20 ಟ್ರೋಫಿಯನ್ನು ಗೆದ್ದುಕೊಂಡಿತು.
ಗೆಲುವಿಗೆ ಪಾರ್ಥೀವ್ ಪಟೇಲ್ ಸಾರಥ್ಯದ ಪ.ವಲಯ ನೀಡಿದ್ದ 150 ರನ್ ಗುರಿಯನ್ನು ಪೂ. ವಲಯ 13.4 ಓವರ್'ಗಳಲ್ಲಿ ಕೇವಲ 2 ವಿಕೆಟ್'ಗೆ 153 ರನ್ ಗಳಿಸುವ ಮೂಲಕ ಭರ್ಜರಿ ಜಯ ಸಾಧಿಸಿತು.
ಆರಂಭಿಕ ಕೆ.ಬಿ. ಅರುಣ್ ಕಾರ್ತಿಕ್ (24) ಮೊದಲ ವಿಕೆಟ್'ಗೆ 61 ರನ್ ಜತೆಯಾಟವಾಡಿ ನಿರ್ಗಮಿಸಿದ ಬಳಿಕ ವಿರಾಟ್ ಸಿಂಗ್ ಮತ್ತು ಇಶಾಂತ್ ಜಗ್ಗಿ ಸ್ಪೋಟಕ ಬ್ಯಾಟಿಂಗ್'ನೊಂದಿಗೆ 80 ರನ್'ಗಳ ಜೊತೆಯಾಟವಾಡಿದರು. ಅರ್ಧಶತಕ ಪೂರೈಸಿದ ಬಳಿಕ ಶಾರ್ದೂಲ್ ಠಾಕೂರ್ ಬೌಲಿಂಗ್'ನಲ್ಲಿ ಜಗ್ಗಿ, ಪಾರ್ಥೀವ್ ಪಟೇಲ್'ಗೆ ಕ್ಯಾಚಿತ್ತು ಕ್ರೀಸ್ ತೊರೆದರು. ಆನಂತರ ಬಂದ ನಾಯಕ ಮನೋಜ್ ತಿವಾರಿ (9) ಮತ್ತು ವಿರಾಟ್ ತಂಡವನ್ನು ಜಯದ ದಡ ತಲುಪಿಸಿದರು.
ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಪ.ವಲಯ ಆರಂಭಿಕ ಶೆಲ್ಡಾನ್ ಜಾಕ್ಸನ್ (52) ಗಳಿಸಿದ ಅರ್ಧಶತಕ, ಹಾಗೂ ಮಧ್ಯಮ ಕ್ರಮಾಂಕದಲ್ಲಿ ಮಂಕಡ್ (20) ಮತ್ತು ರುಜುಲ್ ಭಟ್ ಗಳಿಸಿದ 36 ರನ್'ಗಳ ನೆರವಿನಿಂದ 20 ಓವರ್ಗಳಲ್ಲಿ 5 ವಿಕೆಟ್ಗೆ 159 ರನ್ ಪೇರಿಸಿತು.
ಸಂಕ್ಷಿಪ್ತ ಸ್ಕೋರ್
ಪ.ವಲಯ: 20 ಓವರ್ಗಳಲ್ಲಿ 149/5
(ಜಾಕ್ಸನ್ 52, ರುಜುಲ್ ಭಟ್ 36; ಪ್ರೀತಮ್ ದಾಸ್; 25ಕ್ಕೆ 2)
ಪೂರ್ವ ವಲಯ: 13.4 ಓವರ್'ಗಳಲ್ಲಿ 153/2
(ವಿರಾಟ್ ಸಿಂಗ್ 58*, ಇಶಾಂತ್ ಜಗ್ಗಿ 56; ಠಾಕೂರ್ 31ಕ್ಕೆ 2)
ಫಲಿತಾಂಶ: ಪೂರ್ವ ವಲಯಕ್ಕೆ 8 ವಿಕೆಟ್ ಜಯ
