ಈಗಲ್ ಸೆಲೆಬ್ರೆಷನ್ ಮಾಡಿ ದಂಡಕ್ಕೆ ತುತ್ತಾದ ಆಟಗಾರರ ನೆರವಿಗೆ ಬ್ಯಾಂಕ್ ಖಾತೆ!

ಈಗಲ್ ಸೆಲೆಬ್ರೆಷನ್ ಮಾಡಿ ದಂಡಕ್ಕೆ ತುತ್ತಾದ ಆಟಗಾರರಿಗೆ ನೆರವಿನ ಹಸ್ತ

ಫಿಫಾ ದಂಡ ತೆರಲು ಆಟಗಾರರ ನೆರವಿಗೆ ಬ್ಯಾಂಕ್ ಖಾತೆ

ಅಲ್ಬೇನಿಯಾ ಪ್ರಧಾನಿಯಿಂದ ಬ್ಯಾಂಕ್ ಖಾತೆ ಓಪನ್

 

Eagle celebration: Albanian Prime Minister opens account for players

ಮಾಸ್ಕೋ(ಜೂ.27): ಫಿಫಾ ನಿಯಮ ಉಲ್ಲಂಘಿಸಿ ದಂಡಕ್ಕೆ ತುತ್ತಾಗಿರುವ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರ ದಂಡದ ಮೊತ್ತ ಕಲೆ ಹಾಕಲು ಅಲ್ಬೇನಿಯಾ ಪ್ರಧಾನಿ ಹೊಸ ಬ್ಯಾಂಕ್ ಖಾತೆ ತೆರೆಯುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಸರ್ಬಿಯಾ ವಿರುದ್ದದ ಪಂದ್ಯದ ಗೆಲುವಿನ ನೆಪದಲ್ಲಿ 'ಈಗಲ್ ಸೆಲೆಬ್ರೇಷನ್' ಮಾಡಿದ್ದ ಸ್ವಿಟ್ಜರ್ಲೆಂಡ್ ತಂಡದ ಇಬ್ಬರು ಆಟಗಾರರಿಗೆ ಫಿಫಾ 10 ಸಾವಿರ ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಪಾವತಿ ಮಾಡುವ ಸಲುವಾಗಿ ಅಲ್ಬೇನಿಯಾ ಪ್ರಧಾನಿ ಎದಿ ರಮ ತಮ್ಮ ಅಲ್ಬೇನಿಯಾದ ರೈಫೀಸೆನ್ ಬ್ಯಾಂಕ್ ನಲ್ಲಿ ಪ್ರತ್ಯೇಕ ಖಾತೆ ತೆರೆದಿದ್ದಾರೆ. ಈ ಖಾತೆಗೆ ತಮ್ಮ ದೇಶದ ಜನರು ಉದಾರ ದೇಣಿಗೆ ನೀಡುವ ಮೂಲಕ ವಿಶ್ವಕಪ್ ಫುಟ್ಬಾಲ್ ಟೂರ್ನಿಯಲ್ಲಿ ತಮ್ಮ ದೇಶದ ಪರ ನಿಂತ ಆಟಗಾರರಿಗೆ ನೆರವು ನೀಡುವಂತೆ ಘೋಷಿಸಿದ್ದಾರೆ. ಅಲ್ಲದೆ ಬ್ಯಾಂಕ್ ಖಾತೆಗೆ 'ಡೋಂಟ್ ಬಿ ಅಫ್ರೈಡ್ ಆಫ್ ದಿ ಈಗಲ್' (ಹದ್ದಿನ ಕುರಿತು ಭಯ ಬೇಡ) ಎಂದು ಹೆಸರನ್ನಿಟ್ಟಿದ್ದಾರೆ. 

ಸರ್ಬಿಯಾ ವಿರುದ್ಧದ ಗೆಲುವಿನ ವೇಳೆ ಸ್ವಿಟ್ಜರ್ಲೆಂಡ್ ಪರ ಆಡುತ್ತಿರುವ ತಮ್ಮ ದೇಶದ ಆಟಗಾರರಾದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್ ಸ್ಟೀನರ್ ಈಗಲ್ ಸೆಲೆಬ್ರೇಷನ್ ಮಾಡಿ ವಿವಾದ ಸೃಷ್ಟಿ ಮಾಡಿದ್ದಷ್ಟೇ ಅಲ್ಲದೇ ಫೀಫಾ ಕೆಂಗಣ್ಣಿಗೆ ತುತ್ತಾಗಿದ್ದರು. ಕ್ರೀಡೆಯಲ್ಲಿ ಗೆಲುವಿನ ಸಂಭ್ರಮದ ವೇಳೆ ದೇಶದ, ಇಲ್ಲವೇ ವ್ಯಕ್ತಿಯ ಘನತೆಗೆ ಚ್ಯುತಿ ತರುವಂಥದ್ದು ಅಕ್ಷಮ್ಯ ಅಪರಾಧ. ಆದರೆ ಸರ್ಬಿಯಾವನ್ನು ಅಣಕಿಸುವಂತೆ ಆಟಗಾರರಾದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್ ಸ್ಟೀನರ್ ವರ್ತನೆಗಾಗಿ ಫೀಫಾ ದಂಡ ವಿಧಿಸಿತ್ತು.

ಕಳೆದ ಸೋಮವಾರ ನಡೆದ ವಿಚಾರಣೆಯಲ್ಲಿ ಈ ಮೂವರೂ ಆಟಗಾರರು ತಪ್ಪೊಪ್ಪಿಕೊಂಡಿದ್ದು, ಕ್ಸಾಕಾ ಮತ್ತು ಶಾಕಿರಿಗೆ ಫಿಫಾ 10 ಸಾವಿರ ಸ್ವಿಸ್ ಫ್ರಾಂಕ್ಸ್ (ಅಂದಾಜು 6,83,150 ರೂ) ಮತ್ತು ಸ್ಟೀಫನ್‌ಗೆ 5 ಸಾವಿರ ಸ್ವಿಸ್ ಫ್ರಾಂಕ್ಸ್ ದಂಡ ವಿಧಿಸಿತ್ತು. ಈ ದಂಡದ ಮೊತ್ತ ಕಲೆಹಾಕಲು ಅಲ್ಬೇನಿಯಾ ಪ್ರಧಾನಿ ಈ ಬ್ಯಾಂಕ್ ಖಾತೆ ತೆರಿದ್ದಾರೆ.

ಡಬಲ್ ಈಗಲ್ ಅಥವಾ ಎರಡು ಹದ್ದಿನ ಚಿಹ್ನೆಯು ಆಲ್ಬೇನಿಯನ್ ಧ್ವಜವನ್ನು ಪ್ರತಿನಿಧಿಸುತ್ತದೆ. ಅಂತೆಯೇ ಕೊಸೊವೊ ಪ್ರಾಂತ್ಯದ ಚಿಹ್ನೆ ಕೂಡ ಇದೇ ಆಗಿದೆ. 2008ರಲ್ಲಿ ಕೊಸೊವೊ ಸ್ವಾತಂತ್ರ್ಯ ಘೋಷಿಸಿಕೊಂಡಿತ್ತು. ಆದರೆ, ಸರ್ಬಿಯಾ ಮಾತ್ರ ಈಗಲೂ ಅದನ್ನು ಮಾನ್ಯ ಮಾಡಲು ನಿರಾಕರಿಸುತ್ತ ಬಂದಿದೆ.

ಆದರೆ ಕೊಸೋವೋ ಮಾತ್ರ ತಾನು ಸ್ವಾತಂತ್ರ್ಯ ಎಂದು ಘೋಷಿಸಿಕೊಂಡಿದ್ದು, ಸರ್ಬಿಯಾ ವಿರುದ್ಧ ತೊಡೆ ತಟ್ಟಿ ನಿಂತಿದೆ. ಇನ್ನು ಇದೇ ಕೊಸೋವೋ ಪ್ರಾಂತ್ಯದ ಮೂಲದ ಗ್ರಾನಿಟ್ ಕ್ಸಾಕಾ, ಕ್ಸೆರ್ಡಾನ್ ಶಾಕಿರಿ ಮತ್ತು ಸ್ಟೀಫನ್ ಲಿಚ್ ಸ್ವಿಟ್ಜರ್ಲೆಂಡ್ ತಂಡದ ಪರ ಆಡುತ್ತಿದ್ದು, ಇದೇ ಕಾರಣಕ್ಕೆ ಕಳೆದ ಶುಕ್ರವಾರ ನಡೆದ ಸರ್ಬಿಯಾ ವಿರುದ್ಧ ತಮ್ಮ ತಂಡ ಗೆಲುವು ಸಾಧಿಸುತ್ತಿದ್ದಂತೆಯೇ ತಮ್ಮ ಸ್ವತಂತ್ರ್ಯ ಪ್ರಾಂತ್ಯದ ಗುರುತಾದ ಡಬಲ್ ಈಗಲ್ ಗುರುತನ್ನು ಕೈಯಲ್ಲಿ ತೋರಿಸಿ ಸಂಭ್ರಮಾಚರಣೆ ನಡೆಸಿದ್ದರು.

Latest Videos
Follow Us:
Download App:
  • android
  • ios