ಬ್ರಾವೋ-ಪೊಲ್ಲಾರ್ಡ್ ಇಬ್ಬರ ಜೆರ್ಸಿ ನಂ.400..! ಬಯಲಾಯ್ತು ಇದರ ಹಿಂದಿನ ಸೀಕ್ರೇಟ್..!

Dwayne Bravo Kieron Pollard Divided by IPL teams united by 400 number jesery
Highlights

‘ಪೊಲ್ಲಾರ್ಡ್ 400 ಟಿ20 ಪಂದ್ಯಗಳನ್ನಾಡಿದ ಮೊದಲ ಆಟಗಾರ. ನಾನು 400 ವಿಕೆಟ್ ಪಡೆದ ಮೊದಲ ಬೌಲರ್. ಐಪಿಎಲ್‌'ನ ಮೊದಲ ಪಂದ್ಯದಲ್ಲಿ ಇಬ್ಬರೂ ಆಡಿದರೆ, ಏನಾದರೂ ವಿಭಿನ್ನವಾಗಿ ಈ ಮೈಲಿಗಲ್ಲನ್ನು ಆಚರಿಸೋಣ ಎಂದು ನಿರ್ಧರಿಸಿದೆವು’ ಎಂದು ಶನಿವಾರ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ ಬಳಿಕ ಬ್ರಾವೋ ಹೇಳಿದರು.

ಮುಂಬೈ(ಏ.09): ಐಪಿಎಲ್ 11ನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದ ಚೆನ್ನೈನ ಡ್ವೇನ್ ಬ್ರಾವೋ ಹಾಗೂ ಮುಂಬೈನ ಕೀರನ್ ಪೊಲ್ಲಾರ್ಡ್ ಇಬ್ಬರೂ 400 ಸಂಖ್ಯೆಯುಳ್ಳ ಜೆರ್ಸಿ ತೊಟ್ಟಿದ್ದರು. ಇದಕ್ಕೆ ವಿಶೇಷ ಕಾರಣವಿತ್ತು.

‘ಪೊಲ್ಲಾರ್ಡ್ 400 ಟಿ20 ಪಂದ್ಯಗಳನ್ನಾಡಿದ ಮೊದಲ ಆಟಗಾರ. ನಾನು 400 ವಿಕೆಟ್ ಪಡೆದ ಮೊದಲ ಬೌಲರ್. ಐಪಿಎಲ್‌'ನ ಮೊದಲ ಪಂದ್ಯದಲ್ಲಿ ಇಬ್ಬರೂ ಆಡಿದರೆ, ಏನಾದರೂ ವಿಭಿನ್ನವಾಗಿ ಈ ಮೈಲಿಗಲ್ಲನ್ನು ಆಚರಿಸೋಣ ಎಂದು ನಿರ್ಧರಿಸಿದೆವು’ ಎಂದು ಶನಿವಾರ ಚೆನ್ನೈ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟ ಬಳಿಕ ಬ್ರಾವೋ ಹೇಳಿದರು.

ಮೈದಾನದಾಚೆಗೆ ಬ್ರಾವೋ-ಪೊಲ್ಲಾರ್ಡ್ ಉತ್ತಮ ಸ್ನೇಹಿತರಾಗಿದ್ದು, ಈ ಇಬ್ಬರು ಆಟಗಾರರು ತಮ್ಮ ಪ್ರಾಂಚೈಸಿಗಳೊಟ್ಟಿಗೆ ಮಾತನಾಡಿ 400 ನಂಬರಿನ ಜೆರ್ಸಿ ತೊಟ್ಟಿರುವುದಾಗಿ ಪಂದ್ಯ ಮುಕ್ತಾಯದ ಬಳಿಕ ತಿಳಿಸಿದರು.

loader