Asianet Suvarna News Asianet Suvarna News

ನನ್ನ ಹೇಳಿಕೆ ತಿರುಚಲಾಗಿದೆ: ಸಾಕ್ಷಿ

Dragged into India Pakistan tension Sakshi Malik clears her stand
  • Facebook
  • Twitter
  • Whatsapp

ಬೆಂಗಳೂರು(ಅ.07): ಕ್ರೀಡೆ ಹಾಗೂ ರಾಜಕೀಯ ಕ್ಷೇತ್ರ ಸಂಪೂರ್ಣ ಬೇರೆ ಬೇರೆಯಾಗಿದ್ದು, ಯಾವುದೇ ಕಾರಣಕ್ಕೂ ಕ್ರೀಡೆಯಲ್ಲಿ ರಾಜಕೀಯವನ್ನು ಸೇರಿಸಬಾರದು ಎಂದು ಒಲಿಂಪಿಕ್‌ ಪದಕ ವಿಜೇತೆ ಸಾಕ್ಷಿ ಮಲಿಕ್‌ ತಿಳಿಸಿದರು.

ತನ್ನ ಹನ್ನೊಂದನೇ ವರ್ಷಾಚರಣೆಯನ್ನು ಆಚರಿಸಿಕೊಂಡ ಇಲ್ಲಿನ ಗರುಡಾ ಮಾಲ್‌ನ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸಾಕ್ಷಿ, ‘‘ಇತ್ತೀಚೆಗೆ ಉಭಯ ದೇಶಗಳಲ್ಲಿನ ಅಸಹನೀಯ ವಾತಾವರಣದ ಮಧ್ಯೆಯೇ ಭಾರತದಲ್ಲಿ ಆಡಲು ಪಾಕಿಸ್ತಾನ ಆಟಗಾರರಿಗೆ ಅನುವು ಮಾಡಿಕೊಡಬೇಕು ಎಂದು ಸಾಕ್ಷಿ ಹೇಳಿದ್ದಾರೆಂದು ಕೆಲ ಮಾಧ್ಯಮಗಳು ವರದಿ ಮಾಡಿದ್ದವು.

ಆದರೆ, ನಾನೆಂದೂ ಹಾಗೆ ಹೇಳಿದ್ದಿಲ್ಲ. ಕ್ರೀಡೆ ಮತ್ತು ರಾಜಕೀಯವನ್ನು ತಳುಕು ಹಾಕುವುದಕ್ಕಷ್ಟೇ ನನ್ನ ವಿರೋಧ’’ ಎಂದು ರಿಯೊ ಒಲಿಂಪಿಕ್‌ನಲ್ಲಿ ಕಂಚು ಗೆದ್ದ ಕುಸ್ತಿ ಪಟು ಸಾಕ್ಷಿ ಸ್ಪಷ್ಟಪಡಿಸಿದರು.

Follow Us:
Download App:
  • android
  • ios