‘‘ಧೋನಿ ಅನುಭವಿ ಆಟಗಾರ. ಅವರ ಸಲಹೆಗಳು ತಂಡಕ್ಕೆ ಅಗತ್ಯ''
ನವದೆಹಲಿ(ಮೇ.26): ಭಾರತ ತಂಡದ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್, ತಮ್ಮನ್ನು ಚಾಂಪಿಯನ್ಸ್ ಟ್ರೋಫಿ ತಂಡದಿಂದ ಕೈಬಿಟ್ಟಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜತೆಗೆ ತಂಡದ ಆಯ್ಕೆಯಲ್ಲಿ ಧೋನಿಗಿರುವ ಸವಲತ್ತುಗಳು ನನಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.
ಖಾಸಗಿ ಸುದ್ದಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಹರ್ಭಜನ್, ‘ತಂಡದ ಆಯ್ಕೆ ವಿಷಯ ಬಂದಾಗ ಧೋನಿಯ ಸಲಹೆಗಳನ್ನು ಪರಿಗಣಿಸಲಾಗುತ್ತದೆ. ನಾನೂ 19 ವರ್ಷಗಳಿಂದ ಭಾರತೀಯ ಕ್ರಿಕೆಟ್'ನಲ್ಲಿ ಸಕ್ರಿಯನಾಗಿದ್ದೇನೆ. 2 ಬಾರಿ ವಿಶ್ವಕಪ್ ಗೆದ್ದ ತಂಡದಲ್ಲಿದ್ದೆ. ನನ್ನ ಸಲಹೆಯನ್ನೇಕೆ ಕೇಳುವುದಿಲ್ಲ. ಧೋನಿ ನಾಯಕರಾಗಿದ್ದವರು ನಿಜ. ಆದರೆ ನಾಯಕತ್ವದಿಂದ ಕೆಳಗಿಳಿದ ರೂ ಅವರ ಮಾತಿಗೆ ಮನ್ನಣೆ ಇದೆ ಎಂದಿದ್ದಾರೆ.
ನಾಯಕತ್ವದ ನಂತರ ತಂಡದಿಂದ ಕೆಳಗಿಳಿದ ಮೇಲೆ ಬಿಸಿಸಿಐನಲ್ಲಿ ಧೋನಿ ಪಾತ್ರವೇನು ಎನ್ನುವ ಪ್ರಶ್ನೆಗೆ ಈ ಮೊದಲು ಬಿಸಿಸಿಐ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಪ್ರಸಾದ್ ‘‘ಧೋನಿ ಅನುಭವಿ ಆಟಗಾರ. ಅವರ ಸಲಹೆಗಳು ತಂಡಕ್ಕೆ ಅಗತ್ಯ'' ಎಂದಿದ್ದರು.
ಹರ್ಭಜನ್ ತಾವೂ ಅನುಭವಿ ಆಟಗಾರರಾಗಿದ್ದು ತಮಗೇಕೆ ಸಿಗಬೇಕಿರುವ ಗೌರವ ಸಿಗುತ್ತಿಲ್ಲ ಎಂದಿದ್ದಾರೆ.
