ಟೈಗರ್’ವುಡ್‌ಗೆ ಅಮೆರಿಕಾದ ಅತ್ಯುನ್ನತ ಗೌರವ
ವೈಟ್‌ಹೌಸ್‌ನ ರೋಸ್ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೈಗರ್‌ವುಡ್‌ಗೆ ಅಮೆರಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಅನ್ನು ಪ್ರದಾನ ಮಾಡಿದರು.
ವಾಷಿಂಗ್ಟನ್(ಮೇ.08): ತಾರಾ ಗಾಲ್ಫ್ ಆಟಗಾರ ಟೈಗರ್ ವುಡ್ ಅವರಿಗೆ ಅಮೆರಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
ವೈಟ್‌ಹೌಸ್‌ನ ರೋಸ್ ಗಾರ್ಡನ್‌ನಲ್ಲಿ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಟೈಗರ್‌ವುಡ್‌ಗೆ ಅಮೆರಿಕಾದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ‘ಪ್ರೆಸಿಡೆನ್ಷಿಯಲ್ ಮೆಡಲ್ ಆಫ್ ಫ್ರೀಡಂ’ ಅನ್ನು ಪ್ರದಾನ ಮಾಡಿದರು.
43 ವರ್ಷದ ಟೈಗರ್‌ವುಡ್ ಏಪ್ರಿಲ್ ತಿಂಗಳಲ್ಲಿ ತಮ್ಮ ವೃತ್ತಿಜೀವನದ 5ನೇ ಮಾಸ್ಟರ್ ಟೈಟಲ್ ಅನ್ನು ಗೆದ್ದಿದ್ದರು. ಈ ಪ್ರಶಸ್ತಿಗೆ ಭಾಜನರಾದ 4ನೇ ಹಾಗೂ ಅತ್ಯಂತ ಕಿರಿಯ ಗಾಲ್ಫರ್ ಎಂಬ ಶ್ರೇಯಕ್ಕೆ ವುಡ್ ಪಾತ್ರರಾಗಿದ್ದಾರೆ.