ಚೆಕ್ ಗಣರಾಜ್ಯದ ವೆಡ್ ಲೆಜ್ ಜಾಕುಬ್ (88.38 ಮೀ.) ಮೊದಲ ಸ್ಥಾನ, ಗ್ರೆನೆಡಾದ ಪೀಟರ್ಸ್ (85.75ಮೀ.) 3ನೇ ಸ್ಥಾನಿಯಾದರು.76.31 ಮೀ. ದೂರ ದಾಖಲಿಸಿದ ಭಾರತದ ಕಿಶೋರ್ ಜೆನಾ 9ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರು.
ದೋಹಾ(ಕತಾರ್): ದೋಹಾ ಡೈಮಂಡ್ ಲೀಗ್ ನಲ್ಲಿ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶುಕ್ರವಾರ ನೀರಜ್ ತಮ್ಮ ಕೊನೆ ಪ್ರಯತ್ನದಲ್ಲಿ 88.36. ದೂರಕ್ಕೆ ಎಸೆದರು. ಕೇವಲ 0.02 ಮೀ. ಅಂತರದಲ್ಲಿ ಅಗ್ರ ಸ್ಥಾನ ಕಳೆದುಕೊಂಡರು.
ಚೆಕ್ ಗಣರಾಜ್ಯದ ವೆಡ್ ಲೆಜ್ ಜಾಕುಬ್ (88.38 ಮೀ.) ಮೊದಲ ಸ್ಥಾನ, ಗ್ರೆನೆಡಾದ ಪೀಟರ್ಸ್ (85.75ಮೀ.) 3ನೇ ಸ್ಥಾನಿಯಾದರು.76.31 ಮೀ. ದೂರ ದಾಖಲಿಸಿದ ಭಾರತದ ಕಿಶೋರ್ ಜೆನಾ 9ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರು.
ಈಗಾಗಲೇ ಡೈಮಂಡ್ ಲೀಗ್ ಚಾಂಪಿಯನ್‌ಶಿಪ್ ಗೆದ್ದ ಮೊದಲ ಭಾರತೀಯ ಎನ್ನುವ ಹಿರಿಮೆಗೆ ನೀರಜ್ ಚೋಪ್ರಾ ಪಾತ್ರರಾಗಿದ್ದಾರೆ. ಚಿನ್ನದ ಹುಡುಗ 2022ರ ಆವೃತ್ತಿಯಲ್ಲಿ ಈ ಸಾಧನೆ ಮಾಡಿದ್ದರು. ಇನ್ನು ಕಳೆದ ವರ್ಷ ಅಂದರೆ 2023ರ ಆವೃತ್ತಿಯಲ್ಲಿ ಚೆಕ್ ಗಣರಾಜ್ಯದ ವೆಡ್ ಲೆಜ್ ಜಾಕುಬ್ ಚಾಂಪಿಯನ್ ಕಿರೀಟ ಅಲಂಕರಿಸಿದ್ದರು.
ಸ್ವಿಸ್‌ನ ಪ್ರಸಿದ್ಧ ಒಮೆಗಾ ವಾಚ್ ಕಂಪೆನಿಗ ನೀರಜ್ ಚೋಪ್ರಾ ರಾಯಭಾರಿ
ನವದೆಹಲಿ: ಒಲಿಂಪಿಕ್ಸ್ ಹಾಗೂ ವಿಶ್ವ ಚಾಂಪಿಯನ್‌ಶಿಪ್ ಚಿನ್ನ ವಿಜೇತ, ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರು ಸ್ವಿಜರ್‌ಲೆಂಡ್‌ನ ಜನಪ್ರಿಯ ವಾಚ್ ತಯಾರಿಕಾ ಸಂಸ್ಥೆ ಒಮೆಗಾದ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ. ಒಮೆಗಾ ಸಂಸ್ಥೆಯು 1932ರಿಂದಲೂ ಬಹುತೇಕ ಎಲ್ಲಾ ಒಲಿಂಪಿಕ್ಸ್‌ಗಳಲ್ಲೂ ಅಧಿಕೃತ ಸಮಯ ಪಾಲಕರಾಗಿದ್ದು, ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೂ ಇದೇ ಸಂಸ್ಥೆ ಸಮಯ ಪಾಲಕರಾಗಿರಲಿದೆ.
ಸ್ಟಾರ್ ರೆಸ್ಲರ್ ಬಜರಂಗ್ ಪೂನಿಯಾ ಸಸ್ಪೆಂಡ್: ಒಲಿಂಪಿಕ್ಸ್ ಕನಸು ಭಗ್ನ?
ಈ ಕುರಿತು ಮಾತನಾಡಿದ ಚೋಪ್ರಾ, ಒಲಂಪಿಕ್ ಗೇಮ್ಸ್‌ನಲ್ಲಿ ಸಮಯ ಪಾಲನೆಯಲ್ಲಿ ದೊಡ್ಡ ಪಾತ್ರ ವಹಿಸುವ ಐಕಾನಿಕ್ ಬ್ರ್ಯಾಂಡ್ ಆಗಿರುವ ಒಮೆಗಾದ ಭಾಗವಾಗಲು ತುಂಬಾ ಉತ್ಸುಕನಾಗಿದ್ದೇನೆ. ನಾನು ಒಮೆಗಾದೊಂದಿಗೆ ಉತ್ತಮ ಸಹಯೋಗ, ಮುಂಬರುವ ಪ್ರದರ್ಶನಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದರು.
ಯುಎಸ್ ಓಪನ್ ವಿಜೇತ ಥೀಮ್ ಟೆನಿಸ್‌ಗೆ ಗುಡ್‌ಬೈ
ಲಂಡನ್: 2020ರ ಯುಎಸ್ ಓಪನ್ ಗ್ರ್ಯಾನ್‌ಸ್ಲಾಂ ಟೆನಿಸ್ ಚಾಂಪಿಯನ್, ಆಸ್ಟ್ರೀಯಾದ ಡೊಮಿನಿಕ್ ಥೀಮ್ ಈ ಋತುವಿನ ಅಂತ್ಯಕ್ಕೆ ಟೆನಿಸ್ ವೃತ್ತಿಬದುಕಿಗೆ ವಿದಾಯ ಘೋಷಿಸುವುದಾಗಿ ತಿಳಿಸಿದ್ದಾರೆ.
30ರ ಹರೆಯದ ಥೀಮ್ 2018 ಹಾಗೂ 2019ರ ಫ್ರೆಂಚ್ ಓಪನ್, 2020ರ ಆಸ್ಟ್ರೇಲಿಯನ್ ಓಪನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ವಿಶ್ವ ಶ್ರೇಯಾಂಕದಲ್ಲಿ ಜೀವನಶ್ರೇಷ್ಠ 3ನೇ ಸ್ಥಾನಕ್ಕೇರಿದ್ದ ಅವರು, 2021ರಲ್ಲಿ ಮುಂಗೈ ಗಾಯಕ್ಕೊಳಗಾಗಿದ್ದಾರೆ. ಸುಮಾರು 10 ತಿಂಗಳ ಬಳಿಕ ಟೆನಿಸ್‌ಗೆ ಬಂದರೂ ಲಯಕ್ಕೆ ಮರಳಲು ವಿಫಲವಾಗಿದ್ದು, ಸತತವಾಗಿ ಗಾಯಗೊಳ್ಳುತ್ತಿದ್ದರು.
