ಶಿಖರ್ ಧವನ್ (15: 12 ಎಸೆತ, 3 ಬೌಂಡರಿ), ಕೊಹ್ಲಿ(22: 14 ಎಸೆತ,3 ಬೌಂಡರಿ) ಹಾಗೂ ರೋಹಿತ್ ಶರ್ಮಾ (11: 7 ಎಸೆತ ,  ಬೌಂಡರಿ, ಒಂದು ಸಿಕ್ಸ್'ರ್) ರನ್'ಗಳನ್ನು ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.

ರಾಂಚಿ(ಅ.07): ಏಕದಿನ ಸರಣಿ ಜಯಸಿದ ಭಾರತಕ್ಕೆ ಮೊದಲ ಟಿ20 ಪಂದ್ಯದಲ್ಲಿ ಆಸೀಸ್ ಪಡೆ ಸುಲಭ ತುತ್ತಾಗಿದ್ದಾರೆ. ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯೂ ಕೂಡ ಆಸ್ಟ್ರೇಲಿಯಾ ಪಾಲಿಗೆ ವರದಾನವಾಗಲಿಲ್ಲ.

ಮಳೆಯಿಂದಾಗಿ ಡೆಕ್ವರ್ತ್ ಲೂಯಿಸ್ ಅನ್ವಯ ಆಸ್ಟ್ರೇಲಿಯಾ 118 ರನ್'ಗಳಿಗೆ ಬದಲಾಗಿ ಭಾರತಕ್ಕೆ 6 ಓವರ್'ಗಳಲ್ಲಿ 48 ರನ್ ಗುರಿ ನೀಡಲಾಗಿತ್ತು. ಸುಲಭ ಗುರಿಯನ್ನು ಬೆನ್ನಟ್ಟಿದ ಟೀಂ ಇಂಡಿಯಾ 5.3 ವರ್'ಗಳಲ್ಲಿ 1 ವಿಕೇಟ್ ನಷ್ಟಕ್ಕೆ 49 ರನ್ ಪೇರಿಸಿ 9 ವಿಕೇಟ್'ಗಳ ಜಯಭೇರಿ ಬಾರಿಸಿದರು.

ಶಿಖರ್ ಧವನ್ (15: 12 ಎಸೆತ, 3 ಬೌಂಡರಿ), ಕೊಹ್ಲಿ(22: 14 ಎಸೆತ,3 ಬೌಂಡರಿ) ಹಾಗೂ ರೋಹಿತ್ ಶರ್ಮಾ (11: 7 ಎಸೆತ , ಬೌಂಡರಿ, ಒಂದು ಸಿಕ್ಸ್'ರ್) ರನ್'ಗಳನ್ನು ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.

ಟಾಸ್ ಗೆದ್ದ ಭಾರತ, ಬೌಲರ್'ಗಳದ್ದೆ ಆಟ

ರಾಂಚಿಯ ಜೆಎಸ್'ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಭಾರತ ತಂಡದ ನಾಯಕ ಕೊಹ್ಲಿ ಫೀಲ್ಡಿಂಗ್ ಆಯ್ದುಕೊಂಡರು.ಫಿಂಚ್ (42: 30 ಎಸೆತ, 4 ಬೌಂಡರಿ, 1 ಸಿಕ್ಸ್'ರ್),ಮ್ಯಾಕ್ಸ್'ವೆಲ್(17: 16 ಎಸೆತ, 2 ಬೌಂಡರಿ) ಹಾಗೂ ವಿಕೇಟ್ ಕೀಪರ್ ಪೈನೆ(17: 16 ಎಸೆತ, 1 ಬೌಂಡರಿ, 1 ಸಿಕ್ಸ್'ರ್) ರನ್'ಗಳನ್ನು ಹೊಡೆದಿದ್ದನ್ನು ಬಿಟ್ಟರೆ ಉಳಿದ ಬ್ಯಾಟ್ಸ್'ಮೆನ್'ಗಳು ಒಂದಕಿಯ ಮೊತ್ತವನ್ನು ಬಾರಿಸಲಿಲ್ಲ. ಅಂತಿಮವಾಗಿ 18.4 ಓವರ್'ಗಳಲ್ಲಿ 118/8 ರನ್ ಗಳಿಸಿದ್ದಾಗ ಮಳೆ ಶುರುವಾಗಿ ಟೀಂ ಇಂಡಿಯಾಗೆ 6 ಓವರ್'ಗಳಲ್ಲಿ 48 ರನ್ ಗುರಿ ನೀಡಲಾಯಿತು.

ಭಾರತದ ಪರ ಕುಲ್ದೀಪ್ ಯಾದವ್ 16/2, ಬುರ್ಮಾ 17/2 ಹಾಗೂ ಬಿ. ಕುಮಾರ್, ಪಾಂಡ್ಯ, ಚಹಾಲ್ ತಲಾ ಒಂದೊಂದು ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಕುಲ್ದೀಪ್ ಯಾದವ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪಾತ್ರರಾದರು.

ಸ್ಕೋರ್

ಆಸ್ಟ್ರೇಲಿಯಾ 18.4 ಓವರ್'ಗಳಲ್ಲಿ 118/8

(ಫಿಂಚ್:42, ಕುಲ್ದೀಪ್ ಯಾದವ್ 16/2, ಬುರ್ಮಾ 17/2)

ಭಾರತ 5.3 ಓವರ್'ಗಳಲ್ಲಿ 49/1 (ಡೆಕ್ವರ್ತ್ ಲೂಯಿಸ್ ಅನ್ವಯ 6 ಓವರ್'ಗಳಲ್ಲಿ 48 ರನ್ ಗುರಿ)

ಟೀ ಇಂಡಿಯಾಗೆ 9 ವಿಕೇಟ್ ಜಯ