ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕೈ ಸಮಸ್ಯೆಯಿಂದಾಗಿ ಜೋಕೋ, ಪಂದ್ಯದಿಂದ ನಿವೃತ್ತಿ ಪಡೆದಿದ್ದರು.

ಬೆಲ್‌'ಗ್ರೇಡ್ (ಸರ್ಬಿಯಾ)(ಜು.26): ಮೊಣಕೈ ನೋವಿನಿಂದ ಬಳಲುತ್ತಿರುವ ವಿಶ್ವ ನಂ.4 ಟೆನಿಸ್ ಆಟಗಾರ ನೋವಾಕ್ ಜೋಕೋವಿಚ್ ಈ ಋತುವಿನ ಉಳಿದ ಟೂರ್ನಿಯಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ.

ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಂಬಲ್ಡನ್ ಗ್ರ್ಯಾಂಡ್ ಸ್ಲಾಂ ಕ್ವಾರ್ಟರ್ ಫೈನಲ್‌ನಲ್ಲಿ ಮೊಣಕೈ ಸಮಸ್ಯೆಯಿಂದಾಗಿ ಜೋಕೋ, ಪಂದ್ಯದಿಂದ ನಿವೃತ್ತಿ ಪಡೆದಿದ್ದರು.

ಮುಂದಿನ ತಿಂಗಳು ನಡೆಯಲಿರುವ ಯುಎಸ್ ಓಪನ್‌'ನಲ್ಲೂ ಸರ್ಬಿಯಾ ಆಟಗಾರ ಪಾಲ್ಗೊಳ್ಳುವುದಿಲ್ಲ. ಫೇಸ್‌'ಬುಕ್‌'ನಲ್ಲಿ ಲೈವ್ ಮಾಡಿದ ಜೋಕೋ, ‘ಕಳೆದ ಒಂದು ಒಂದೂವರೆ ವರ್ಷದಿಂದ ಮೊಣಕೈ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಹಾಗಾಗಿ 2017ರಲ್ಲಿ ಯಾವುದೇ ಪಂದ್ಯಾವಳಿಯಲ್ಲಿ ಭಾಗವಹಿಸುವುದಿಲ್ಲ’ ಎಂದಿದ್ದಾರೆ.