10ನೇ ಫ್ರೆಂಚ್‌ ಓಪನ್‌ ಮೇಲೆ ಕಣ್ಣಿಟ್ಟಿರುವ ನಡಾಲ್‌, ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಪ್ಯಾರಿಸ್‌(ಮೇ.27): ಹಾಲಿ ಚಾಂಪಿಯನ್‌ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು 9 ಬಾರಿ ಚಾಂಪಿಯನ್‌ ಸ್ಪೇನ್‌'ನ ರಾಫೆಲ್‌ ನಡಾಲ್‌, ಈ ಬಾರಿಯ ಫ್ರೆಂಚ್‌ ಓಪನ್‌ ಗ್ರ್ಯಾಂಡ್‌ ಸ್ಲಾಂ ಟೆನಿಸ್‌ ಟೂರ್ನಿಯ ಸೆಮಿಫೈನಲ್‌'ನಲ್ಲಿ ಎದುರಾಗುವ ಸಾಧ್ಯತೆಯಿದೆ.

ಭಾನುವಾರದಿಂದ ಮೊದಲ ಸುತ್ತಿನ ಪಂದ್ಯಗಳು ಆರಂಭಗೊಳ್ಳಲಿವೆ. 10ನೇ ಫ್ರೆಂಚ್‌ ಓಪನ್‌ ಮೇಲೆ ಕಣ್ಣಿಟ್ಟಿರುವ ನಡಾಲ್‌, ಟೂರ್ನಿಯಲ್ಲಿ ಪ್ರಭಾವಿ ಪ್ರದರ್ಶನದ ವಿಶ್ವಾಸದಲ್ಲಿದ್ದಾರೆ.

ಇನ್ನು ಜೊಕೊವಿಚ್‌'ಗೆ ಫ್ರೆಂಚ್‌ ಓಪನ್‌'ನಿಂದ ವಿಶ್ವ ಮಾಜಿ ನಂಬರ್‌ ಒನ್ ಆಟಗಾರ ಅಮೆರಿಕದ ಆ್ಯಂಡ್ರಿ ಅಗಾಸಿ ಕೋಚ್‌ ಆಗಿದ್ದು, ಪ್ರಶಸ್ತಿ ಉಳಿಸಿಕೊಳ್ಳುವ ಮೂಲಕ ಈ ಜೋಡಿ ಭರ್ಜರಿ ಆರಂಭ ಪಡೆಯುವ ವಿಶ್ವಾಸದಲ್ಲಿದೆ.

ಅಗ್ರ ಶ್ರೇಯಾಂಕಿತ ಆಟಗಾರ ಬ್ರಿಟನ್‌'ನ ಆ್ಯಂಡಿ ಮರ್ರೆ, ಉಪಾಂತ್ಯದಲ್ಲಿ 2015ರ ಚಾಂಪಿಯನ್‌ ಸ್ವಿಟ್ಜರ್‌ಲೆಂಡ್‌'ನ ಸ್ಟಾನಿಸ್ಲಾಸ್‌ ವಾವ್ರಿಂಕಾ ಅವರನ್ನು ಎದುರಿಸುವ ಸಾಧ್ಯತೆಯಿದೆ. ರೋಜರ್‌ ಫೆಡರರ್‌ ಈ ಪಂದ್ಯಾವಳಿಯಿಂದ ಹಿಂದೆ ಸರಿದಿದ್ದಾರೆ.