‘‘ನಾನು ಸಾಧಿಸಲು ಸಾಧ್ಯವಾಗದ್ದನ್ನು ನೀವು ಸಾಧಿಸಿ ತೋರಿಸಿರುವಿರಿ. ವೈಯಕ್ತಿಕವಾಗಿ ನಾನು ನಿಮ್ಮಿಬ್ಬರನ್ನೂ ಭೇಟಿಯಾಗಿ ಅಭಿನಂದಿಸ ಬಯಸುತ್ತೇನೆ’’

ರಿಯೊ ನಗರಿಯಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದ ಎರಡನೇ ದಿನದಂದು ಪದಕ ಗೆದ್ದ ಸಾಧಕರನ್ನು ದೇಶದ ನಂ.1 ಮಹಿಳಾ ಜಿಮ್ನಾಸ್ಟ್‌ ದೀಪಾ ಕರ್ಮಾಕರ್‌ ಕೊಂಡಾಡಿದ್ದಾರೆ.

‘‘ನಾನು ಸಾಧಿಸಲು ಸಾಧ್ಯವಾಗದ್ದನ್ನು ನೀವು ಸಾಧಿಸಿ ತೋರಿಸಿರುವಿರಿ. ವೈಯಕ್ತಿಕವಾಗಿ ನಾನು ನಿಮ್ಮಿಬ್ಬರನ್ನೂ ಭೇಟಿಯಾಗಿ ಅಭಿನಂದಿಸ ಬಯಸುತ್ತೇನೆ’’ ಎಂದು ಚಿನ್ನ ಗೆದ್ದ ಮರಿಯಪ್ಪನ್‌ ತಂಗವೇಲು ಹಾಗೂ ಕಂಚು ವಿಜೇತ ವರುಣ್‌ ಸಿಂಗ್‌ ಭಾಟಿಯನ್ನು ಉದ್ದೇಶಿಸಿ ದೀಪಾ ಹೇಳಿದ್ದಾರೆ.

ಇನ್ನು ಆಕೆಯ ಕೋಚ್‌ ಬಿಶ್ವೇಶ್ವರ್‌ ನಂದಿ, ‘‘ನೀವು ಭಾರತೀಯರಾದ ನಾವು ಹೆಮ್ಮೆಪಡುವಂತೆ ಮಾಡಿದ್ದೀರಿ. ನಿಮ್ಮ ದೆಸೆಯಿಂದ ನಾನೊಬ್ಬ ಭಾರತೀಯ ಎಂದುಕೊಳ್ಳಲು ಹೆಮ್ಮೆಪಡುತ್ತೇನೆ’’ ಎಂದಿದ್ದಾರೆ.