ನವದೆಹಲಿ(ನ.12): ಮಾಜಿ ಕ್ರಿಕೆಟಿಗ ದಿಲೀಪ್ ವೆಂಗ್‌'ಸರ್ಕಾರ್ ಅವರನ್ನು ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಯ ಸದಸ್ಯರನ್ನಾಗಿ ನೇಮಕ ಮಾಡಲಾಗುವುದು ಎಂದು ಬಿಸಿಸಿಐನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮುಂದಿನ ದಿನಗಳಲ್ಲಿ ಬಿಸಿಸಿಐನಲ್ಲಿ ವೆಂಗ್'ಸರ್ಕಾರ್ ಪಾತ್ರ ಕುರಿತು ಸ್ಪಷ್ಟನೆ ನೀಡಿರುವ ಬಿಸಿಸಿಐನ ಅಧಿಕಾರಿಗಳು, ವೆಂಗ್‌'ಸರ್ಕಾರ್'ರನ್ನು ಬಿಸಿಸಿಐನಿಂದ ತೆಗೆದು ಹಾಕುವ ಯಾವುದೇ ಯೋಚನೆಯಿಲ್ಲ ಎಂದಿದ್ದಾರೆ. ವೆಂಗ್‌'ಸರ್ಕಾರ್‌'ರನ್ನು ಎನ್‌'ಸಿಎ ಸದಸ್ಯರನ್ನಾಗಿ ನೇಮಕ ಮಾಡಲು ಚಿಂತನೆ ನಡೆಸಲಾಗಿದೆ. ಬಿಸಿಸಿಐನ ಮುಂದಿನ ವಾರ್ಷಿಕ ಸಭೆಯಲ್ಲಿ ಈ ಕುರಿತು ತೀರ್ಮಾನ ಕೈಗೊಳ್ಳಲಾಗುವುದು. ಅಲ್ಲದೇ ಪೂರ್ಣಕಾಲದ ‘ವಿಶೇಷ ಯೋಜನೆಗಳ’ ನಿರ್ದೇಶಕರನ್ನಾಗಿಯೂ ಅವರನ್ನು ನೇಮಕ ಮಾಡಲು ಚಿಂತನೆ ನಡೆಸಲಾಗಿದೆ ಎಂದಿದ್ದಾರೆ.

61 ವರ್ಷದ ದಿಲೀಪ್ ವೆಂಗ್'ಸರ್ಕಾರ್ 116 ಟೆಸ್ಟ್ ಪಂದ್ಯಗಳನ್ನಾಡಿದ್ದು 6868 ರನ್ ಬಾರಿಸಿದ್ದಾರೆ. ಇದೇವೇಳೆ ಬಿಸಿಸಿಐ ವೆಂಗ್'ಸರ್ಕಾರ್ ಅವರೊಂದಿಗೆ ಯಾವುದೇ ಒಪ್ಪಂದ ಮಾಡಿಕೊಂಡಿಲ್ಲ ಎಂದು ಬಿಸಿಸಿಐ ಆಡಳಿತ ಸಮಿತಿ ಉನ್ನತಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.