ರಷ್ಯಾ(ಜೂ.27): ನೈಜಿರಿಯಾ ವಿರುದ್ದದ ಮಹತ್ವದ ಪಂದ್ಯದಲ್ಲಿ ಅರ್ಜೆಂಟೀನಾ ಗೆಲವು ಸಾಧಿಸುತ್ತಿದ್ದಂತೆ,  ಗ್ಯಾಲರಿಯಲ್ಲಿ ಪಂದ್ಯ ವೀಕ್ಷಿಸುತ್ತಿದ್ದ ದಿಗ್ಗಜ ಡಿಯಾಗೋ ಮರಡೋನಾ ಕುಸಿದು ಬಿದ್ದ ಘಟನೆ ನಡೆದಿದೆ.

ನೆಜಿರಿಯಾ ವಿರುದ್ದ 2-1 ಅಂತರದಲ್ಲಿ ಗೆಲುವು ಸಾಧಿಸಿದ ಅರ್ಜೆಂಟೀನಾ, ನಾಕೌಟ್ ಹಂತಕ್ಕೆ ಪ್ರವೇಶ ಪಡೆಯಿತು. ಈ ಗೆಲುವಿನ ಖುಷಿಯಲ್ಲಿ ತೇಲಾಡಿದ ದಿಗ್ಗಜ ಮರಡೋನಾ ಅನಾರೋಗ್ಯಕ್ಕೆ ತುತ್ತಾಗಿ ದಿಢೀರ್ ಕುಸಿದು ಬಿದ್ದರು.

 

 

ತಕ್ಷಣವೇ ಮರಡೋನಾ ಅವರನ್ನ ಕ್ರೀಡಾಂಗಣಲ್ಲಿನ ಕೊಠಡಿಗೆ ಕರೆದೊಯ್ದು ನೀರು ಕುಡಿಸಲಾಗಿದೆ. ಇಷ್ಟೇ ಅಲ್ಲ ಆಸ್ಪತ್ರೆಗೆ ದಾಖಲಿಸಿದರು.  ರಕ್ತದೊತ್ತಡದಲ್ಲಿ ಎರುಪೇರಾದ ಕಾರಣ ಮರಡೋನಾ ನೆಲಕ್ಕೆ ಕುಸಿದು ಬಿದ್ದಿದ್ದಾರೆ. ಮರಡೋನಾಗೆ ವಿಶ್ರಾಂತಿಯ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ.  ಸದ್ಯ ಮರಡೋನಾ ಚೇತರಿಸಿಕೊಂಡಿದ್ದಾರೆ.

ನೈಜಿರಿಯಾ ವಿರುದ್ಧದ ಪಂದ್ಯ ಅರ್ಜೆಂಟೀನಾ ತಂಡಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಈ ಪಂದ್ಯದ ಫಲಿತಾಂಶ ಅರ್ಜೆಂಟೀನಾ ತಂಡಕ್ಕೆ ಪ್ರಮುಖ ಪಂದ್ಯವಾಗಿತ್ತು. ಹೀಗಾಗಿ ಈ ಗೆಲುವನ್ನ ಅಭಿಮಾನಿಗಳು ಸೇರಿದಂತೆ, ದಿಗ್ಗಜ ಮರಡೋನಾ ವಿಶೇಷವಾಗಿ ಸಂಭ್ರಮಿಸಿದರು.