ಧೋನಿ ಬಟರ್ ಚಿಕನ್ ಬಿಡಲು ಕೊಹ್ಲಿ ಕಾರಣವೇ..?

First Published 15, Jun 2018, 8:48 PM IST
Did Kohli Inspire Dhoni To Give Up Butter Chicken
Highlights

ಧೋನಿಗೆ ಬಟರ್ ಚಿಕನ್ ತಿನ್ನಬೇಡಿ ಅಂದ್ರಾ ವಿರಾಟ್?

ವಿರಾಟ್ ಸ್ಪೂರ್ತಿ ಪಡೆದು ಚಿಕನ್ ತಿನ್ನೋದನ್ನೇ ಬಿಟ್ರಾ ಧೋನಿ?

ವಿಶ್ವಕಪ್ ಗೆ ಧೋನಿ ತಯಾರಿ ಹೇಗಿದೆ?

ಫಿತ್ನೆಸ್ ಕಾಪಾಡಲು ಚಿಕನ್ ಒಲ್ಲೆ ಎಂದ ಧೋನಿ

ನವದೆಹಲಿ(ಜೂ.15): ಟೀಂ ಇಂಡಿಯಾದ ತಂಡದಲ್ಲಿ ವಿರಾಟ್ ಕೊಹ್ಲಿ ಸದ್ಯ ಅತ್ಯುತ್ತಮ ಫಿಟ್ನೆಸ್ ಕಾಪಾಡಿಕೊಂಡು ಬಂದಿರುವ ಆಟಗಾರ. ವಿರಾಟ್ ಫಿಟ್ನೆಸ್‌ಗಾಗಿ ತಮ್ಮ ಅತ್ಯಂತ ಇಷ್ಟವಾದ ಚಿಕನ್ ಕೂಡ ಸೇವನೆ ಮಾಡುವುದನ್ನು ಬಿಟ್ಟು ಬಿಟ್ಟಿದ್ದಾರೆ. ಕಳೆದ ಐದು ವರ್ಷಗಳಲ್ಲಿ ವಿರಾಟ್ ಕೊಹ್ಲಿ ಚಿಕನ್ ಮುಟ್ಟಿಲ್ಲ. ಅಂತೇ ಇದೀಗ ಕೊಹ್ಲಿಯಿಂದ ಸ್ಪೂರ್ತಿ ಪಡೆದಿರುವ ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಸಹ ಚಿಕನ್ ತಿನ್ನುವುದನ್ನು ಬಿಟ್ಟು ಬಿಟ್ಟಿದ್ದಾರೆ.
 
ಧೋನಿ ಕೂಡ ತಮ್ಮ ಫಿಟ್ನೆಸ್ ಕುರಿತು ಅತ್ಯಂತ ಜಾಗರೂಕರಾಗಿರುತ್ತಾರೆ. ಟೀಂ ಇಂಡಿಯಾದ ಇತರೆಲ್ಲ ಆಟಗಾರರಿಗಿಂತ ಅತ್ಯಂತ ಚುರುಕಾಗಿ ಮತ್ತು ಪಾದರಸದಂತೆ ಧೋನಿ ಮೈದಾನದಲ್ಲಿ ಮಿಂಚುತ್ತಾರೆ. ದೈಹಿಕ ಶ್ರಮಕ್ಕೆ ಭಾರೀ ಒತ್ತು ಕೊಡುವ ಧೊನಿ, 2019 ರ ವಿಶ್ವಕಪ್‌ ಗೆಲ್ಲುವಲ್ಲಿ ತಮ್ಮ ಪಾತ್ರ ಅತ್ಯಂತ ಮಹತ್ವದ್ದು ಎಂಬುದನ್ನು ಅರಿತಿದ್ದಾರೆ.

ಎಂಎಸ್ ಧೋನಿ 2014ರಲ್ಲಿ ಟೆಸ್ಟ್ ತಂಡದ ನಾಯಕತ್ವಕ್ಕೆ ವಿದಾಯ ಹೇಳಿದ್ದರು. ಅಲ್ಲಿಂದ ತಮ್ಮ ಡಯೇಟ್ ಅನ್ನು ಕಟ್ಟು ನಿಟ್ಟು ಮಾಡಿಕೊಂಡಿರುವ ಧೋನಿ ಸಹ ಚಿಕನ್ ತಿನ್ನುವುದನ್ನು ಬಿಟ್ಟುಬಿಟ್ಟಿದ್ದಾರೆ. ಇದಕ್ಕೆ ಮುಂದಿನ ವರ್ಷ ನಡೆಯಲಿರುವ ಏಕದಿನ ವಿಶ್ವಕಪ್ ಪಂದ್ಯಾವಳಿ ಕಾರಣ ಎಂದು ಹೇಳಲಾಗುತ್ತಿದೆ. 

loader