ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಏಕದಿನ ಮತ್ತು ಟಿ-20 ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಸ್ವಯಂಪ್ರೇರಿತವಾಗಿ ನಾಯಕನ ಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೂ ಧೋನಿ ಮತ್ತೊಂದು ತಂಡದ ನಾಯಕರಾಗಿದ್ದಾರೆ.
ಮುಂಬೈ(ಜ.06): ಟೀಮ್ ಇಂಡಿಯಾದ ಯಶಸ್ವಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಏಕದಿನ ಮತ್ತು ಟಿ-20 ನಾಯಕತ್ವದಿಂದ ಕೆಳಗಿಳಿದಿದ್ದಾರೆ. ಸ್ವಯಂಪ್ರೇರಿತವಾಗಿ ನಾಯಕನ ಸ್ಥಾನಕ್ಕೆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆದರೂ ಧೋನಿ ಮತ್ತೊಂದು ತಂಡದ ನಾಯಕರಾಗಿದ್ದಾರೆ.
ಹೌದು, ಜನವರಿ 10ರಂದು ಮುಂಬೈನಲ್ಲಿ ನಡೆಯಲಿರುವ ಮೊದಲ ಅಭ್ಯಾಸ ಪಂದ್ಯಕ್ಕೆ ನಾಯಕರಾಗಿರುವ ಧೋನಿ ತಂಡವನ್ನ ಮುನ್ನಡೆಸಲಿದ್ದಾರೆ. ಧೋನಿ ಟೀಮ್`ನಲ್ಲಿ ಧವನ್, ಮಂದೀಪ್ ಸಿಂಗ್, ರಾಯುಡು, ಯುವರಾಜ್, ಪಾಂಡ್ಯ, ಸಾಮ್ಸನ್, ಕುಲ್ದೀಪ್, ಚಾಹಲ್, ನೆಹ್ರಾ, ಮೋಹಿತ್ ಶರ್ಮಾ ಮತ್ತು ಕೌಲ್ ಆಡುತ್ತಿದ್ದಾರೆ. 2ನೇ ಅಭ್ಯಾಸ ಪಂದ್ಯಕ್ಕೆ ಅಜಿಂಕ್ಯ ರಹಾನೆ ನಾಯಕರಾಗಿದ್ದಾರೆ.
