ಎರಡನೇ ವಿಕೆಟ್’ಗೆ ವಾಟ್ಸನ್-ಸುರೇಶ್ ರೈನಾ ಜೋಡಿ 86 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ವಾಟ್ಸನ್[39]  ಜೋಪ್ರಾ ಆರ್ಚರ್’ಗೆ ಎರಡನೇ ಬಲಿಯಾದರು. ರೈನಾ 52 ರನ್ ಬಾರಿಸಿ ಇಶ್ ಸೋದಿಗೆ ವಿಕೆಟ್ ಒಪ್ಪಿಸಿದರು.

ಜೈಪುರ[ಮೇ.11]: ಸುರೇಶ್ ರೈನಾ[52] ಆಕರ್ಷಕ ಅರ್ಧಶತಕದ ನೆರವಿನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧ ಚೆನ್ನೈ ಸೂಪರ್’ಕಿಂಗ್ಸ್ 176 ರನ್ ಕಲೆಹಾಕಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಸಿಎಸ್’ಕೆ ಮೂರನೇ ಓವರ್’ನಲ್ಲಿ ಅಂಬಟಿ ರಾಯುಡು ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್’ಗೆ ವಾಟ್ಸನ್-ಸುರೇಶ್ ರೈನಾ ಜೋಡಿ 86 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ವಾಟ್ಸನ್[39] ಜೋಪ್ರಾ ಆರ್ಚರ್’ಗೆ ಎರಡನೇ ಬಲಿಯಾದರು. ರೈನಾ 52 ರನ್ ಬಾರಿಸಿ ಇಶ್ ಸೋದಿಗೆ ವಿಕೆಟ್ ಒಪ್ಪಿಸಿದರು. ಕೊನೆಯಲ್ಲಿ ನಾಯಕ ಧೋನಿ ಚುರುಕಿನ ಬ್ಯಾಟಿಂಗ್ ನಡೆಸಿದರು. 23 ಎಸೆತಗಳಲ್ಲಿ 33 ರನ್ ಬಾರಿಸಿ ಅಜೇಯರಾಗುಳಿದರೆ, ಸ್ಯಾಮ್ ಬಿಲ್ಲಿಂಗ್ಸ್ 27 ರನ್ ಬಾರಿಸಿ ಕೊನೆಯ ಓವರ್’ನಲ್ಲಿ ರನೌಟ್ ಆದರು.
ರಾಜಸ್ಥಾನ ರಾಯಲ್ಸ್ ಪರ ಜೋಪ್ರಾ ಆರ್ಚರ್ 2 ವಿಕೆಟ್ ಪಡೆದರೆ, ಇಶ್ ಸೋದಿ ಒಂದು ವಿಕೆಟ್ ಪಡೆದರು. 
ಸಂಕ್ಷಿಪ್ತ ಸ್ಕೋರ್:

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

CSK: 176/4

ಸುರೇಶ್ ರೈನಾ: 52

ಜೋಪ್ರಾ ಆರ್ಚರ್: 42/2

[*ವಿವರ ಅಪೂರ್ಣ]