ಧೋನಿಗಿಂತ ಜೋಸ್ ಬಟ್ಲರ್ ಅತ್ಯುತ್ತಮ ಪ್ಲೇಯರ್: ಟಿಮ್ ಪೈನೆ

Dhoni Pretty Good, But Buttler the Best Right Now: Tim Paine
Highlights

ಟೀಂ ಇಂಡಿಯಾ ಕ್ರಿಕೆಟಿಗರ ಎಂ ಎಸ್ ಧೋನಿಗಿಂತ ಅತ್ಯುತ್ತಮ ಕ್ರಿಕೆಟಿಗ ಯಾರು ಅನ್ನೋ ಪ್ರಶ್ನೆಗೆ, ಆಸ್ಟ್ರೇಲಿಯಾ ನಾಯಕ ಉತ್ತರ ನೀಡಿದ್ದಾರೆ. ಹಾಗಾದರೆ ಪೈನೆ ಹೇಳೋ ಪ್ರಕಾರ ಬಟ್ಲರ್ ಯಾಕೆ ಅತ್ಯುತ್ತಮ ಆಟಗಾರ? ಇಲ್ಲಿದೆ ವಿವರ.
 

ಮೆಲ್ಬೋರ್ನ್(ಜೂ.26): ಟೀಂ ಇಂಡಿಯಾ ಕ್ರಿಕೆಟಿಗ ಎಂ ಎಸ್ ಧೋನಿ ಅತ್ಯುತ್ತಮ ಕ್ರಿಕೆಟಿಗ, ಆದರೆ ಸದ್ಯ ಧೋನಿಗಿಂತ ಇಂಗ್ಲೆಂಡ್ ತಂಡದ ಜೋಸ್ ಬಟ್ಲರ್ ಬೆಸ್ಟ್ ಪ್ಲೇಯರ್ ಎಂದು ಆಸ್ಟ್ರೇಲಿಯಾ ತಂಡ ನಾಯಕ ಟಿಮ್ ಪೈನೆ ಹೇಳಿದ್ದಾರೆ. 

ಆಸ್ಟ್ರೇಲಿಯಾ ವಿರುದ್ದಧ ಅಂತಿಮ ಪಂದ್ಯದಲ್ಲಿ ಜೋಸ್ ಬಟ್ಲರ್ ಅಜೇಯ 110 ರನ್ ಸಿಡಿಸಿ ಸರಣಿ ಕ್ಲೀನ್ ಸ್ವೀಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.  ಈ ಪಂದ್ಯದಲ್ಲಿ ಬಟ್ಲರ್ ಗೇಮ್ ಫೀನಿಶಿಂಗ್ ಧೋನಿಗಿಂತ ಅತ್ಯುತ್ತಮವಾಗಿತ್ತು. ಹೀಗಾಗಿ ಬಟ್ಲರ್ ಬೆಸ್ಟ್ ಕ್ರಿಕೆಟಿಗ ಎಂದು ಪೈನೆ ಶ್ಲಾಘಿಸಿದ್ದಾರೆ. 

ಆಸ್ಟ್ರೇಲಿಯಾ ವಿರುದ್ಧ 5 ಏಕದಿನ ಪಂದ್ಯಗಳ ಸರಣಿಯಲ್ಲಿ ಇಂಗ್ಲೆಂಡ್ 5-0 ಅಂತರದ ಗೆಲುವು ಸಾಧಿಸಿತು. ಈ ಮೂಲಕ ಆಸಿಸ್ ತಂಡ ವೈಟ್ ವಾಶ್ ಮುಖಭಂಗ ಅನುಭವಿಸಿದೆ. ಸರಣಿ ಸೋಲಿನ ಬಳಿಕ ಇಂಗ್ಲೆಂಡ್ ತಂಡವನ್ನ ಆಸ್ಟ್ರೇಲಿಯಾ ನಾಯಕ ಟಿಮ್ ಪೈನೆ ಪ್ರಶಂಸಿದ್ದಾರೆ.


 

loader