2014-15ರ ಆಸ್ಟ್ರೇಲಿಯಾ ಪ್ರವಾಸದ ಬಳಿಕ ಟೆಸ್ಟ್ ಕ್ರಿಕೆಟ್'ಗೆ ಗುಡ್ ಬೈ ಹೇಳಿದ್ದ ಮಾಹಿ, 2016ರಲ್ಲಿ ಸೀಮಿತ ಓವರ್'ಗಳ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದರು. ಚೊಚ್ಚಲ ಟಿ20 ವಿಶ್ವಕಪ್ ಹಾಗೂ 2011ರ ಏಕದಿನ ವಿಶ್ವಕಪ್ ಗೆದ್ದುಕೊಟ್ಟ 36 ವರ್ಷದ ಧೋನಿ ಟಿ20 ನಿವೃತ್ತಿಯ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.

ಕೋಲ್ಕತಾ(ನ.12): ಅಂತರಾಷ್ಟ್ರೀಯ ಟಿ20ಗೆ ಎಂ.ಎಸ್. ಧೋನಿ ನಿವೃತ್ತಿ ಘೋಷಿಸಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯದ ಬಗ್ಗೆ ಮಾಜಿ ನಾಯಕ ಮಾಹಿ ಮೌನ ಮುರಿದಿದ್ದಾರೆ.

ಮಾಜಿ ಕ್ರಿಕೆಟಿಗರ ಹೇಳಿಕೆ ಬಗ್ಗೆ ಸ್ವತಃ ಧೋನಿ ಪ್ರತಿಕ್ರಿಯಿಸಿದ್ದು, ‘ಪ್ರತಿಯೊಬ್ಬರಿಗೂ ತಮ್ಮ ಅಭಿಪ್ರಾಯಗಳನ್ನು ಹೇಳುವ ಸ್ವಾತಂತ್ರ್ಯವಿದೆ. ಅವರ ದೃಷ್ಟಿಕೋನದಲ್ಲಿ ಟೀಕಿಸಬೇಕು ಎನಿಸಿದರೆ, ಅದಕ್ಕೆ ಅವರಿಗೆ ಸಂಪೂರ್ಣ ಹಕ್ಕಿದೆ. ಅದನ್ನು ಗೌರವಿಸಬೇಕು’ ಎಂದು ಕ್ಯಾಪ್ಟನ್ ಕೂಲ್ ಮಾಹಿ ಹೇಳಿದ್ದಾರೆ.

ವಿವಿಎಸ್ ಲಕ್ಷ್ಮಣ್, ಅಜಿತ್ ಅಗರ್ಕರ್ ಸೇರಿದಂತೆ ಹಲವು ಮಾಜಿ ಕ್ರಿಕೆಟಿಗರು ಧೋನಿ, ಟಿ20 ತಂಡದಲ್ಲಿ ಮುಂದುವರಿಯುವ ಬಗ್ಗೆ ಧ್ವನಿಯೆತ್ತಿದ್ದರು.