ಮುಂದಿನ ವಿಶ್ವಕಪ್ ವೇಳೆಗೆ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ದ್ರಾವಿಡ್ ತಿಳಿಸಿದರು.

ನವದೆಹಲಿ(ಜ.06): ಭಾರತ ಕ್ರಿಕೆಟ್ ತಂಡದ ಸೀಮಿತ ಓವರ್‌'ಗಳ ನಾಯಕತ್ವ ಸ್ಥಾನದಿಂದ ಕೆಳಕ್ಕಿಳಿದ ಎಂ.ಎಸ್. ಧೋನಿ ನಿರ್ಧಾರ ಸೂಕ್ತವಾದದ್ದು ಎಂದು ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಧೋನಿ 2019ರಲ್ಲಿ ನಡೆಯುವ ಐಸಿಸಿ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಯವರೆಗೂ ಆಡುವುದು ಸಾಧ್ಯವಿಲ್ಲ ಎಂಬ ಅರಿವಿನಿಂದ ಮುಂಚಿತವಾಗಿಯೇ ನಾಯಕ ಸ್ಥಾನದಿಂದ ಕೆಳಕ್ಕಿಳಿದು ಪರಿಪಕ್ವತೆಯ ನಿರ್ಧಾರಕ್ಕೆ ಬದ್ಧರಾಗಿದ್ದಾರೆ.

ಅಲ್ಲದೇ ಈ ವೇಳೆ ವಿರಾಟ್ ಕೊಹ್ಲಿ ತಂಡದ ನಾಯಕ ಸ್ಥಾನ ವಹಿಸಿಕೊಳ್ಳಲು ಅರ್ಹರಾಗಿದ್ದಾರೆ. ಮುಂದಿನ ವಿಶ್ವಕಪ್ ವೇಳೆಗೆ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ ಪ್ರಭಾವಿ ಪ್ರದರ್ಶನ ತೋರುವ ವಿಶ್ವಾಸವಿದೆ ಎಂದು ದ್ರಾವಿಡ್ ತಿಳಿಸಿದರು.