2011ರ ವಿಶ್ವಕಪ್‌ ಜಯಿಸಿದ ನಂತರದ ಧೋನಿ ಜೀವನಾಧಾರಿತ 2ನೇ ಚಿತ್ರ ಮುಂದಿನ ವರ್ಷ ತೆರೆಗೆ ಭರ್ಜರಿ ಯಶಸ್ಸು ಕಂಡಿದ್ದ ಧೋನಿ ಜೀವನಾಧಾರಿತ ಚಿತ್ರ ‘ಎಂ.ಎಸ್‌.ಧೋನಿ-ಆನ್‌ ಅನ್‌ಟೋಲ್ಡ್‌ ಸ್ಟೋರಿ’

ನವದೆಹಲಿ: ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಅಭಿಮಾನಿಗಳಿಗೆ ಒಂದು ಸಂತಸದ ಸುದ್ದಿಯಿದೆ.

2011ರ ವಿಶ್ವಕಪ್‌ ಜಯಿಸಿದ ನಂತರದ ಧೋನಿ ಜೀವನಾಧಾರಿತ 2ನೇ ಚಿತ್ರ ಮುಂದಿನ ವರ್ಷ ತೆರೆ ಕಾಣಲಿದೆ ಎನ್ನುವ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಹರಿದಾಡುತ್ತಿದೆ.

ಆರ್‌ವಿಎಸ್‌ಪಿ ಚಿತ್ರ ನಿರ್ಮಾಣ ಸಂಸ್ಥೆ ಧೋನಿ-2 ಚಿತ್ರ ನಿರ್ಮಿಸಲು ಮುಂದಾಗಿದೆ. 2016ರಲ್ಲಿ ತೆರೆ ಕಂಡಿದ್ದ ಧೋನಿ ಜೀವನಾಧಾರಿತ ಚಿತ್ರ ‘ಎಂ.ಎಸ್‌.ಧೋನಿ-ಆನ್‌ ಅನ್‌ಟೋಲ್ಡ್‌ ಸ್ಟೋರಿ’ಭರ್ಜರಿ ಯಶಸ್ಸು ಕಂಡಿತ್ತು.

ಸುಶಾಂತ್‌ ಸಿಂಗ್‌ ರಜಪೂತ್‌, ಧೋನಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಐಪಿಎಲ್‌ ಜಯ, ಮಗಳು ಝೀವಾ ಜನನ, 2015ರ ವಿಶ್ವಕಪ್‌ ಸೆಮೀಸ್‌ ಸೋಲು ಸೇರಿ ಕೆಲ ಪ್ರಮುಖ ಘಟನೆಗಳ ಮೇಲೆ ಚಿತ್ರ ಬೆಳಕು ಚೆಲ್ಲಲಿದೆ ಎನ್ನಲಾಗಿದೆ.