Asianet Suvarna News Asianet Suvarna News

(ವಿಡಿಯೋ)ವಿರಾಟ್, ವಿಜೇಂದರ್'ಗೆ ತರಬೇತಿ ನೀಡಿದ್ದರಂತೆ ರಾಮ್ ರಹೀಂ!: ವೈರಲ್ ಆಯ್ತು ಬಾಬಾ ಹೇಳಿಕೆ

ಡೇರಾ ಸಚ್ಚಾ ಸೌಧಾ ಸಂಘಟನೆಯ ಬಾಬಾ ಗುರ್ಮೀತ್ ರಾಮ್ ರಹೀಂ ಅತ್ಯಾಚಾರಿ ಎಂಬ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಕೋರ್ಟ್ ತೀರ್ಪಿನಿಂದ ರೊಚ್ಚಿಗೆದ್ದ ಅವರ ಬೆಂಬಲಿಗರು ಹಿಂಸಾಚಾರದಲ್ಲಿ ತೊಡಗಿದ್ದಾರೆ, ಹರ್ಯಾಣ ಸೇರಿದಂತೆ ಮೂರು ರಾಜ್ಯಗಳಲ್ಲಿ ಈ ಹಿಂಸಾಚಾರದಿಂದಾಗಿ ಅಪಾರ ಹಾನಿ ಸಮಭವಿಸಿದ್ದು ಸುಮಾರು 32 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ಇವೆಲ್ಲ ಬೆಳವಣಿಗೆಗಳ ನಡುವೆಯೇ ಸಾಮಾಜಿಕ ಜಾಲಾತಾಣಗಳಲ್ಲಿ ಕೊಹ್ಲಿ ಸೇರಿದಂತೆ ಕ್ರಿಕೆಟ್ ದಿಗ್ಗಜರಿಗೆ ಸಂಬಂಧಿಸಿದಂತೆ ಬಾಬಾ ನೀಡಿದ ಹೇಳಿಕೆಯಿರುವ ವಿಡಿಯೋವೊಂದು ಬಹಳಷ್ಟು ವೈರಲ್ ಆಗುತ್ತಿದೆ. ಅಷ್ಟಕದಕೂ ಈ ವಿಡಿಯೋದಲ್ಲಿ ರಾಮ್ ರಹೀಂ ಹೇಳಿದ್ದೇನು? ಇಲ್ಲಿದೆ ವಿವರ

Dera chief Gurmeet Ram Rahim claims he trained Virat Kohli Vijender Singh

ಡೇರಾ ಸಚ್ಚಾ ಸೌಧಾ ಸಂಘಟನೆಯ ಬಾಬಾ ಗುರ್ಮೀತ್ ರಾಮ್ ರಹೀಂ ಅತ್ಯಾಚಾರಿ ಎಂಬ ಆರೋಪ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಕೋರ್ಟ್ ತೀರ್ಪಿನಿಂದ ರೊಚ್ಚಿಗೆದ್ದ ಅವರ ಬೆಂಬಲಿಗರು ಹಿಂಸಾಚಾರದಲ್ಲಿ ತೊಡಗಿದ್ದಾರೆ, ಹರ್ಯಾಣ ಸೇರಿದಂತೆ ಮೂರು ರಾಜ್ಯಗಳಲ್ಲಿ ಈ ಹಿಂಸಾಚಾರದಿಂದಾಗಿ ಅಪಾರ ಹಾನಿ ಸಮಭವಿಸಿದ್ದು ಸುಮಾರು 32 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಆದರೆ ಇವೆಲ್ಲ ಬೆಳವಣಿಗೆಗಳ ನಡುವೆಯೇ ಸಾಮಾಜಿಕ ಜಾಲಾತಾಣಗಳಲ್ಲಿ ಕೊಹ್ಲಿ ಸೇರಿದಂತೆ ಕ್ರಿಕೆಟ್ ದಿಗ್ಗಜರಿಗೆ ಸಂಬಂಧಿಸಿದಂತೆ ಬಾಬಾ ನೀಡಿದ ಹೇಳಿಕೆಯಿರುವ ವಿಡಿಯೋವೊಂದು ಬಹಳಷ್ಟು ವೈರಲ್ ಆಗುತ್ತಿದೆ. ಅಷ್ಟಕದಕೂ ಈ ವಿಡಿಯೋದಲ್ಲಿ ರಾಮ್ ರಹೀಂ ಹೇಳಿದ್ದೇನು? ಇಲ್ಲಿದೆ ವಿವರ

ಸ್ವಯಂ ಘೋಷಿತ ದೇವಮಾನವ ರಾಮ್ ರಹೀಂ ಬಿಂದಾಸ್ ಆಗಿ ಜೀವನ ನಡೆಸುತ್ತಿದ್ದ ವ್ಯಕ್ತಿ. ಸಿನಿಮಾವೊಂದರಲ್ಲೂ ನಟಿಸಿದ್ದ ಇವರು ತಾವೊಬ್ಬ ಕ್ರೀಡಾಪಟು ಎಂದೂ ಹೇಳಿಕೊಳ್ಳುತ್ತಿದ್ದರು. ನಿನ್ನೆಯಷ್ಟೇ ಇವರನ್ನು ಸಿಬಿಐ ವಿಶೇಷ ನ್ಯಾಯಾಲಯ ಻ತ್ಯಾಚಾರಿ ಎಂದು ಘೋಷಿಸಿದ್ದು, ಈ ತೀರ್ಪು ಕೇಳಿ ಖುದ್ದು ಬಾಬಾ ಕೂಡಾ ಒಂದು ಬಾರಿ ಬೆಚ್ಚಿ ಬಿದ್ದಿದ್ದಾರೆ. ಇವರ ಬೆಂಬಲಿಗರಂತೂ ಾಕ್ರೋಶಕ್ಕೆ ಹರ್ಯಾಣ ಸೇರಿದಂತೆ 3 ರಾಜ್ಯಗಳು ನಲುಗಿವೆ. ಈ ಮಧ್ಯೆ 2016 ಸೆಪ್ಟೆಂಬರ್ 17ರಂದು ಸಾಮಾಜಿಕ ಜಾಲಾತಾಣಕ್ಕೆ ಅಪ್ಲೋಡ್ ಆದ ವಿಡಿಯೋ ಒಂದು ಬಹಳಷ್ಟು ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿರುವ ರಾಮ್ ರಹೀಂ ವಿರಾಟ್ ಕೊಹ್ಲಿ ಹಾಗೂ ಕುಸ್ತಿಪಟು- ಬಾಕ್ಸರ್ ವಿಜೇಂದರ್ ಸಿಂಗ್'ಗೆ ತಾನೇ ತರಬೇತಿ ನೀಡಿದ್ದೆ ಎಂದಿದ್ದಾರೆ.

 'ನನ್ನನ್ನು ನಾನು ಎಲ್ಲಾ ಕಾರ್ಯಗಳಲ್ಲೂ ತೊಡಗಿಸಿಕೊಂಡಿದ್ದೇನೆ. 32 ರಾಷ್ಟ್ರೀಯ ಪಂದ್ಯಗಳಲ್ಲಿ ತಾನು ಆಡಿದ್ದೇನೆ. ದೇಶಕ್ಕೆ ಹೆಸರು ತಂದುಕೊಟ್ಟಿರುವ ಆಟಗಾರರಾದ ವಿಜೇಂದರ್, ವಿರಾಟ್ ಕೊಹ್ಲಿ ನನ್ನ ಬಳಿಯೇ ತರಬೇತಿ ಪಡೆದಿದ್ದರು. ಶಿಖರ್ ಧವನ್, ಆಶಿಶ್ ನೆಹ್ರಾ, ಜಹೀರ್ ಖಾನ್, ಯೂಸುಫ್ ಪಠಾಣ್ ಕೂಡಾ ನನ್ನ ಬಳಿ ಕೋಚಿಂಗ್ ಪಡೆದಿದ್ದರು. ಈ ಕುರಿತಾಗಿ ಸಾರ್ವಜನಿಕವಾಗಿ ಹೇಳಿಕೊಳ್ಳುತ್ತಿಲ್ಲ, ಅದು ಅವರಿಗೆ ಬಿಟ್ಟ ವಿಚಾರ. ಆದರೆ ಅವರು ಯಾವ ರೀತಿ ನನ್ನ ಬಳಿ ಬಂದು ತರಬೇತಿ ಪಡೆದಿದ್ದರು ಎಂಬ ವಿಡಿಯೋ ಕೂಡಾ ಇದೆ. ಸಮಯ ಸಿಕ್ಕಾಗ ಅದನ್ನು ನಾನು ತೋರಿಸುತ್ತೇನೆ' ಎಂದಿದ್ದಾರೆ.

ವೈರಲ್ ಆದ ಈ ವಿಡಿಯೋದಲ್ಲಿ ಈ ಅತ್ಯಾಚಾರಿ ಬಾಬಾ ನೀಡಿರುವ ಹೇಳಿಕೆ ಎಷ್ಟು ನಿಜ, ಎಷ್ಟು ಸುಳ್ಳು ಎಂಬುವುದು ತಿಳಿದಿಲ್ಲ. ಆದರೆ ಸದ್ದಯದ ಪರಿಸ್ಥಿತಿಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ಹೆಸರು ಬೆಳಗಿಸಿದ ಕ್ರೀಡಾ ದಿಗ್ಗಜರ ಕುರಿತಾಗಿ ರಾಮ್ ರಹೀಂ ನೀಡಿದ್ದ ಹೇಳಿಕೆ ಭಾರೀ ಸದ್ದು ಮಾಡುತ್ತಿದೆ.

Follow Us:
Download App:
  • android
  • ios