ನ್ಯೂಯಾರ್ಕ್(ಡಿ.14): ಡೆಮೋಕ್ರಾಟಿಕ್ ಪಕ್ಷದ ನಾಯಕಿ ತುಳಸಿ ಗಬ್ಬಾರ್ಡ್ ಪರಿಚಯಿಸಿದ ಮಹಿಳಾ ಕ್ರೀಡಾ ಹಕ್ಕುಗಳ ರಕ್ಷಣೆ ಗೆ ಸಂಬಂಧಿಸಿದ ಕಾನೂನಿಗೆ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ತುಳಸಿ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.

ಗುರುವಾರವಷ್ಟೇ ತುಳಸಿ ಗಬ್ಬಾರ್ಡ್ ಹಾಗೂ ಮಾರ್ಕ್‌ವೇನ್‌ ಮುಲಿನ್ ಜತೆಯಾಗಿ ಮಹಿಳಾ ಕ್ರೀಡಾ ಹಕ್ಕುಗಳ ರಕ್ಷಣೆಗೆ ಸಂಬಂಧಿಸಿದ ಮಸೂದೆಯೊಂದನ್ನು ಮಂಡಿಸಿದ್ದರು. ವಿಶ್ವದ ಅತ್ಯನ್ನತ ಹುದ್ದೆಯಲ್ಲಿರುವ ಅನೇಕ ಮಹಿಳೆಯರಿಗೆ ಕ್ರೀಡೆಯ ಹಿನ್ನೆಲೆ ಇರುತ್ತದೆ. ಆದರೆ, ಹೆಣ್ಣು ಮಕ್ಕಳು ಶಾಲೆಯಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ, ಆದರೆ ದೊಡ್ಡವರಾಗ್ತಾ ಹೋದಂತೆ ಕ್ರೀಡೆಯ ಮೇಲಿನ ಆಸಕ್ತಿ ಕಡಿಮೆಯಾಗುತ್ತದೆಯಂತೆ. ಇದನ್ನು ಗಮನದಲ್ಲಿಟ್ಟುಕೊಂಡು ಭಾರತೀಯ ಮೂಲದ ಡೆಮೋಕ್ರಾಟಿಕ್ ಪ್ರತಿನಿಧಿ ತುಳಸಿ ಗಬ್ಬಾರ್ಡ್‌ ಅಮೆರಿಕದ ಮಹಿಳಾ ಕ್ರೀಡಾ ಸಂರಕ್ಷಣಾ ಕಾಯ್ದೆ ಜಾರಿಗೊಳಿಸಿದ್ದಾರೆ. 

ಆಟ, ಪಠ್ಯದಲ್ಲಿ ಇದೆಂಥಾ ಬೇಧಭಾವವೆಂದು ಜನರು ಈ ಕಾಯ್ದೆಯನ್ನು ವಿರೋಧಿಸಿದ್ದಾರೆ. ಅದಕ್ಕೆ ತುಳಸಿ ಗಬ್ಬಾರ್ಡ್ ಟ್ವೀಟ್ ವಿಡಿಯೋ ಮಾಡಿ ಏನಕ್ಕೆ ಈ ಕಾಯ್ದೆ ತರುತ್ತಿರುವುದಾಗಿ ವಿವರಿಸಿದ್ದಾರೆ.

ಭಾರತ ವಿರುದ್ಧದ ಪಿಂಕ್ ಬಾಲ್ ಟೆಸ್ಟ್‌ಗೆ ಆಸೀಸ್‌ ತಂಡ ಪ್ರಕಟಿಸಿದ ಶೇನ್‌ ವಾರ್ನ್..!

ಹೆಣ್ಣು ಮಕ್ಕಳಿಗೇ ಅಂತ ಕೆಲವು ಕ್ರೀಡೆಗಳನ್ನು ಮೀಸಲಾಗಿಟ್ಟು, ಅದರಲ್ಲಿ ಪುರುಷರು ಆಡದಂತೆ ಮಾಡಿದರೆ ಮಹಿಳೆಯರು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳು ಹೆಚ್ಚುತ್ತೆ. ದೊಡ್ಡವರಾದ ಹಾಗೆ ಬಾಲಕಿಯರು ಕ್ರೀಡಾ ಚಟುವಟಿಕೆಗಳಿಂದ ವಿಮುಖರಾಗದಂತೆ ತಪ್ಪಿಸಲು ಈ ಕಾಯ್ದೆ ಅನುವು ಮಾಡಿಕೊಡಲಿದೆ ಎಂಬುವುದು ಆಕೆಯ ವಾದ. 

ಒಟ್ಟಿನಲ್ಲಿ ಬಾಲಕಿಯರು ಹೆಚ್ಚೆಚ್ಚು ಕ್ರೀಡಾ ಚಟುವಟೆಕೆಗಳಲ್ಲಿ ಪಾಲ್ಗೊಳ್ಳುವಂತೆ ಅವಕಾಶ ಕಲ್ಪಿಸುವ ಕಾಯ್ದೆ ಇದಾಗಿದ್ದು, ಮಹಿಳೆಯರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿಯೂ ಕ್ರೀಡೆಯ ಈ ಮೀಸಲಾತಿ ನೆರವಾಗಬಹುದೆಂಬ ನಂಬಿಕೆ ತುಳಸಿಯದ್ದು.