ದೆಹಲಿ(ಏ.27):  ನೂತನ ನಾಯಕ ಶ್ರೇಯಸ್ ಅಯ್ಯರ್ ಅವರ ಸಿಕ್ಸರ್ ಸುರಿಮಳೆಯಾಟ ಹಾಗೂ ಪೃಥ್ವಿ ಶಾ ಅವರ ಅಮೋಘ ಆಟದ ನೆರವಿನಿಂದ ಡೆಲ್ಲಿ ಡೇರ್ ಡೇವಿಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವಿರುದ್ಧ55 ರನ್’ಗಳ ಜಯಗಳಿಸಿದರು.
ಡೆಲ್ಲಿ ನೀಡಿದ್ದ 219 ರನ್ ಗುರಿಯನ್ನು ಬೆನ್ನಟ್ಟಿದ ದಿನೇಶ್ ಕಾರ್ತಿಕ್ ನೇತ್ವತ್ವದ ಕೋಲ್ಕತ್ತಾ ತಂಡ 164/9 ರನ್ ಗಳಿಸಲಷ್ಟೆ ಸಾಧ್ಯವಾಯಿತು.  ಶುಬ್ಮನ್ ಗಿಲ್ (37), ರೆಸಲ್(44), ನರೈನ್(26)  ಪ್ರತಿರೋಧ ತೋರಿದ್ದು ಹೊರತುಪಡಿಸಿದರೆ ಉಳಿದ ಬ್ಯಾಟ್ಸ್’ಮೆನ್ಗಳು ವಿಫಲರಾದರು. ಡೆಲ್ಲಿ ಪರ ಬೌಲ್ಟ್, ಮ್ಯಾಕ್ಸ್’ವೆಲ್, ಆವೀಶ್ ಖಾನ್ ಹಾಗೂ ಅಮಿತ್ ಮಿಶ್ರಾ ತಲಾ 2 ವಿಕೇಟ್ ಪಡೆದು ಕೋಲ್ಕತ್ತಾ ಪತನಕ್ಕೆ ಕಾರಣರಾದರು.
ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟ್ ಆರಂಭಿಸಿದ ಡೆಲ್ಲಿ ಶ್ರೇಯಸ್ ಅಯ್ಯರ್(93 ಅಜೇಯ, 10ಸಿಕ್ಸರ್ , 3 ಬೌಂಡರಿ) ಹಾಗೂ ಪೃಥ್ವಿ ಶಾ (62) ಅಮೋಘ ಆಟದ ನೆರವಿನಿಂದ 219 ರನ್ ಗುರಿನೀಡಲು ಸಾಧ್ಯವಾಯಿತು.

ಸ್ಕೋರ್ 

ಡೆಲ್ಲಿ ಡೇರ್’ಡೇವಿಲ್ಸ್ 20 ಓವರ್’ಗಳಲ್ಲಿ  219/4
(ಅಯ್ಯರ್ 93, ಪೃಥ್ವಿ ಶಾ 62)

ಕೋಲ್ಕತ್ತಾ 20 ಓವರ್’ಗಳಲ್ಲಿ 164/9
(ಶುಬ್ಮಾನ್ ಗಿಲ್  37, ರೆಸಲ್ 44)

ಡೆಲ್ಲಿ ತಂಡಕ್ಕೆ  55 ರನ್ ಜಯ

ಪಂದ್ಯ ಶ್ರೇಷ್ಠ : ಶ್ರೇಯಸ್ ಅಯ್ಯರ್