ಕುಸ್ತಿಪಟುಗಳು ಅಮಿತ್‌ ಷಾ ಭೇಟಿ ಬೆನ್ನಲ್ಲೇ ಬ್ರಿಜ್‌ಭೂಷಣ್ ವಿರುದ್ಧ ಪೊಲೀಸ್ ತನಿಖೆ ಚುರುಕು..!

ಬ್ರಿಜ್‌ಭೂಷಣ್‌ ಮನೆಗೆ ದಿಲ್ಲಿ ಪೊಲೀಸರ ಭೇಟಿ
ಆಪ್ತರು, ಫೆಡರೇಶನ್‌ ಅಧಿಕಾರಿಗಳ ವಿಚಾರಣೆ
ಕುಸ್ತಿಪಟುಗಳು ಅಮಿತ್ ಶಾ ಭೇಟಿ ಬೆನ್ನಲ್ಲೇ ತನಿಖೆ ಚುರುಕು

Delhi Police at WFI chief Brij Bhushan Singh residence in UP Gonda records statements kvn

ನವದೆಹಲಿ(ಜೂ.07): ಕುಸ್ತಿಪಟುಗಳಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ ಅಧ್ಯಕ್ಷ ಬ್ರಿಜ್‌ಭೂಷಣ್‌ ಸಿಂಗ್‌ ವಿರುದ್ಧ ತನಿಖೆಯನ್ನು ದೆಹಲಿ ಪೊಲೀಸರು ಚುರುಕುಗೊಳಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಕುಸ್ತಿಪಟುಗಳು ಶನಿವಾರ ಭೇಟಿ ಮಾಡಿದ ಚರ್ಚಿಸಿದ ಬೆನ್ನಲ್ಲೇ ಬ್ರಿಜ್‌ರ ದೆಹಲಿ, ಲಖನೌ ಹಾಗೂ ಗೊಂಡ ನಿವಾಸಗಳಿಗೆ ದೆಹಲಿ ಪೊಲೀಸರು ಭೇಟಿ ನೀಡಿ ಅವರ ಆಪ್ತರು, ಮನೆಗೆಲಸದವರನ್ನು ವಿಚಾರಣೆ ನಡೆಸಿದ್ದಾರೆ.

ಕೆಲಸದವರ ಬಳಿ ಬ್ರಿಜ್‌ರ ವರ್ತನೆ, ನಡತೆಯ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದ್ದು, ವಿಚಾರಣೆಗೆ ಒಳಪಟ್ಟವರ ಮಾಹಿತಿ, ವಿಳಾಸವನ್ನು ಪೊಲೀಸರು ಸಂಗ್ರಹಿಸಿದ್ದಾರೆ. ಮುಂದೆ ಮತ್ತೆ ವಿಚಾರಣೆಗೆ ಕರೆದರೆ ಬರಬೇಕಾಗಿ ಸೂಚಿಸಿದ್ದಾರೆ ಎನ್ನಲಾಗಿದೆ. ಇದೇ ವೇಳೆ ಕುಸ್ತಿ ಫೆಡರೇಶನ್‌ಗೆ 3-4 ಅಧಿಕಾರಿಗಳನ್ನೂ ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿರುವುದಾಗಿ ತಿಳಿದುಬಂದಿದೆ. ಅಧಿಕಾರಿಗಳಿಂದ ಬ್ರಿಜ್‌ರ ಕೆಲಸದ ಶೈಲಿ, ಕುಸ್ತಿ ಚಟುವಟಿಕೆಗಳಿಗೆ ಸಂಬಂಧಿಸಿದ ವಿಚಾರಗಳ ಬಗ್ಗೆ ಮಾಹಿತಿ ಪಡೆದಿರುವುದಾಗಿ ವರದಿಯಾಗಿದೆ.

 ಭಾರ​ತೀಯ ಕುಸ್ತಿ ಫೆಡ​ರೇ​ಷನ್‌​(​ಡ​ಬ್ಲ್ಯು​ಎ​ಫ್‌​ಐ​) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ವಿರುದ್ಧ ಲೈಂಗಿಕ ಕಿರು​ಕುಳ ಸೇರಿ​ದಂತೆ ವಿವಿಧ ಆರೋ​ಪ​ಗ​ಳನ್ನು ಹೊರಿಸಿ ಅಪ್ರಾಪ್ತೆ ಸೇರಿ 7 ಕುಸ್ತಿ​ಪ​ಟು​ಗಳು ನೀಡಿದ್ದ ದೂರಿನ ಸಂಪೂರ್ಣ ವಿವರ ಸದ್ಯ ಬಹಿ​ರಂಗ​ಗೊಂಡಿ​ದೆ. ಏ.28ರಂದು ದೆಹ​ಲಿ ಪೊಲೀ​ಸರು ಬ್ರಿಜ್‌ ವಿರುದ್ಧ ಪೋಕ್ಸೋ ಸೇರಿ 2 ಪ್ರಕ​ರ​ಣ​ಗ​ಳನ್ನು ದಾಖ​ಲಿ​ಸಿ​ದ್ದರು. ಎಫ್‌ಐಆರ್‌ ಆದ ಒಂದು ತಿಂಗಳಿಗೂ ಹೆಚ್ಚು ಸಮಯದ ಬಳಿಕ ವಿವರಗಳು ಮಾಧ್ಯಮಗಳಿಗೆ ಲಭ್ಯವಾಗಿವೆ. 

ಹೋರಾಟ ಕೈಬಿ​ಟ್ಟಿ​ಲ್ಲ: ಕುಸ್ತಿಪಟುಗಳ ಸ್ಪಷ್ಟನೆ

ಕುಸ್ತಿಪಟುಗಳು ಕೆಲಸಕ್ಕೆ ಮರಳುತ್ತಿದ್ದಂತೆ ಕೆಲ ಮಾಧ್ಯ​ಮ​ಗ​ಳಲ್ಲಿ ಬ್ರಿಜ್‌ ವಿರುದ್ಧದ ಹೋರಾಟ ಕೊನೆಗೊಂಡಿದೆ ಎಂದು ಸುದ್ದಿ ಬಿತ್ತರಿಸಿದ್ದವು. ಇದನ್ನು ಕುಸ್ತಿಪಟುಗಳು ಅಲ್ಲಗಳೆದಿದ್ದಾರೆ. ಈ ಬಗ್ಗೆ ಭಜ​ರಂಗ್‌, ವಿನೇಶ್‌ ಹಾಗೂ ಸಾಕ್ಷಿ ಮೂವರೂ ತಮ್ಮ ಟ್ವೀಟರ್‌ ಖಾತೆ​ಗ​ಳಲ್ಲಿ ಸ್ಪಷ್ಟನೆ ನೀಡಿದ್ದು, ನ್ಯಾಯ ಸಿಗು​ವ​ವ​ರೆಗೂ ಹೋರಾಟ ಮುಂದು​ವ​ರಿ​ಯಲಿದೆ ಎಂದಿ​ದ್ದಾರೆ. 

Wrestlers Protest: ಕುಸ್ತಿ​ಪ​ಟು​ಗಳನ್ನು ಬೆಂಬ​ಲಿ​ಸಿ ಮತ್ತೆ ಮಹಾ​ಪಂಚಾ​​ಯ​ತ್‌

‘ನಮ್ಮ ಹೋರಾಟ ಕೈಬಿ​ಟ್ಟಿಲ್ಲ ಮತ್ತು ಹಿಂದೆ​ ಸ​ರಿ​ದಿಲ್ಲ. ದೂರು ವಾಪಸ್‌ ಪಡೆಯಲಾಗಿದೆ ಎನ್ನುವ ಸುದ್ದಿಯೂ ಸುಳ್ಳು. ನಮ್ಮ ಹೋರಾಟವನ್ನು ಹತ್ತಿಕ್ಕಲು ಕಾಯುತ್ತಿರುವವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ನ್ಯಾಯಕ್ಕಾಗಿ ಹೋರಾಟ ಮುಂದುವರಿಸಲಿದ್ದೇವೆ’ ಎಂದು ಭಜ​ರಂಗ್‌ ತಿಳಿ​ಸಿ​ದ್ದಾ​ರೆ.

ಶಾ ಭೇಟಿ ಬಗ್ಗೆ ಮಾತನಾಡದಂತೆ ಸರ್ಕಾರ ಸೂಚಿಸಿದೆ: ಭಜರಂಗ್‌!

ಕಳೆದ ಶನಿವಾರ ರಾತ್ರಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿ ಮಾಡಿದ ಬಳಿಕ ರೈಲ್ವೇ ಕೆಲಸಕ್ಕೆ ಮರಳಿದ ಬಗ್ಗೆ ಪ್ರತಿಕ್ರಿಯಿಸಿರುವ ಕುಸ್ತಿಪಟು ಭಜರಂಗ್‌ ಪೂನಿಯಾ, ‘ಶಾ ಭೇಟಿ ವೇಳೆ ಚರ್ಚೆಯಾದ ವಿಚಾರಗಳ ಬಗ್ಗೆ ಮಾತನಾಡದಂತೆ ಸರ್ಕಾರ ಸೂಚಿಸಿದೆ’ ಎಂದಿದ್ದಾರೆ. ‘ಕಾನೂನು ಎಲ್ಲರಿಗೂ ಒಂದೇ. ಅದು ತನ್ನ ರೀತಿಯಲ್ಲಿ ಕೆಲಸ ಮಾಡಲಿ’ ಎಂದು ಶಾ ಹೇಳಿದರು ಎಂದಷ್ಟೇ ಭಜರಂಗ್‌ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಮಿತ್‌ ಶಾರನ್ನು ಭೇಟಿ​ಯಾಗಿ, ಬ್ರಿಜ್‌​ರನ್ನು ಬಂಧಿ​ಸುವಂತೆ ಬೇಡಿಕೆ ಇಟ್ಟಿ​ದ್ದೇವೆ. ಸತ್ಯಾ​ಗ್ರ​ಹದ ಜೊತೆಗೆ ರೈಲ್ವೇ ಇಲಾ​ಖೆ​ಯಲ್ಲಿ ಕತ್ರ್ಯ​ವ್ಯಕ್ಕೆ ಹಾಜ​ರಾ​ಗುತ್ತಿ​ದ್ದೇನೆ. ನಾವು ಹೋರಾ​ಟ​ದಿಂದ ಹಿಂದೆ ಸರಿ​ದಿಲ್ಲ. ಸುಳ್ಳು ಸುದ್ದಿ ಹರ​ಡ​ಬಾ​ರದು. ನಮ್ಮನ್ನು ಹಿಮ್ಮೆ​ಟ್ಟಿ​ಸಲು ಯಾರಿಂದಲೂ ಸಾಧ್ಯ​ವಿಲ್ಲ ಎಂದು ಒಲಿಂಪಿಕ್ ಪದಕ ವಿಜೇತೆ ಸಾಕ್ಷಿ ಮಲಿಕ್ ಹೇಳಿದ್ದಾರೆ.

Latest Videos
Follow Us:
Download App:
  • android
  • ios