ಕೆಲ ತಿಂಗಳ ಹಿಂದಷ್ಟೇ ಐಪಿಎಲ್ ಟೂರ್ನಿಯಲ್ಲಿ ಕೋಚ್ ಆಗುವ ಕುರಿತಂತೆ ಗಿಲೆಸ್ಪಿ ಒಲವು ತೋರಿದ್ದರು. 2011ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಆಗಿಯೂ ಗಿಲೆಸ್ಪಿ ಕಾರ್ಯನಿರ್ವಹಿಸಿದ್ದರು.

ನವದೆಹಲಿ(ಆ20): ರಾಹುಲ್ ದ್ರಾವಿಡ್ 19 ವರ್ಷದೊಳಗಿನ ಹಾಗೂ ಭಾರತ ಎ ರಾಷ್ಟ್ರೀಯ ತಂಡಕ್ಕಾಗಿ ತರಬೇತುದಾರರಾಗಲು ಹುದ್ದೆ ತೊರೆದ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ನೂತನ ಕೋಚ್ ಹುಡುಕಾಟದಲ್ಲಿದೆ.

Add Asianetnews Kannada as a Preferred SourcegooglePreferred

ಮೂಲಗಳ ಪ್ರಕಾರ, ಆಸ್ಟ್ರೇಲಿಯಾದ ಮಾಜಿ ವೇಗಿ ಜೇಸನ್ ಗಿಲೆಸ್ಪಿರನ್ನು ಕೋಚ್ ಆಗುವಂತೆ ಸಂಪರ್ಕಿಸಲಾಗಿದೆ ಎನ್ನಲಾಗಿದೆ. ಗಿಲೆಸ್ಪಿ ಸದ್ಯ ಬಿಗ್‌'ಬ್ಯಾಶ್ ಟಿ20 ಲೀಗ್‌'ನ ಅಡಿಲೇಡ್ ಸ್ಟ್ರೈಕರ್ಸ್‌ ತಂಡದ ಪ್ರಧಾನ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಇಂಗ್ಲೆಂಡ್ ಕೌಂಟಿಯ ಯಾರ್ಕ್‌ಶೈರ್ ತಂಡದೊಂದಿಗಿನ ಯಶಸ್ವಿ ಅಭಿಯಾನದ ಬಳಿಕ ಗಿಲೆಸ್ಪಿಗೆ ಬೇಡಿಕೆ ಹೆಚ್ಚಾಗಿದೆ.

ಕೆಲ ತಿಂಗಳ ಹಿಂದಷ್ಟೇ ಐಪಿಎಲ್ ಟೂರ್ನಿಯಲ್ಲಿ ಕೋಚ್ ಆಗುವ ಕುರಿತಂತೆ ಗಿಲೆಸ್ಪಿ ಒಲವು ತೋರಿದ್ದರು. 2011ರಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಕೋಚ್ ಆಗಿಯೂ ಗಿಲೆಸ್ಪಿ ಕಾರ್ಯನಿರ್ವಹಿಸಿದ್ದರು.