23 ವರ್ಷದ ಸಾಕ್ಷಿ, ರಿಯೊ ಒಲಿಂಪಿಕ್'ನಲ್ಲಿ ಮಹಿಳೆ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.

ನವದೆಹಲಿ(ಡಿ.24): ಬಾಲಿವುಡ್‌'ನಲ್ಲಿ ಯಾರಾದರೂ ತಮ್ಮ ಕ್ರೀಡಾಜೀವನ ಕುರಿತಾದ ಚಲನಚಿತ್ರ ನಿರ್ಮಿಸಿದರೆ ಅದು ನನಗೆ ಖಂಡಿತಾ ಖುಷಿ ನೀಡಲಿದೆ ಎಂದು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತ ಕುಸ್ತಿಪಟು ಸಾಕ್ಷಿ ಮಲಿಕ್ ತಿಳಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಿಂದಿ ಚಿತ್ರರಂಗದಲ್ಲಿ ಇತ್ತೀಚೆಗೆ ಕ್ರೀಡಾಳುಗಳ ಸಾಧನೆ ಕುರಿತಾದ ಚಿತ್ರಗಳು ಬರುತ್ತಿವೆ. ಇತ್ತೀಚೆಗಷ್ಟೇ ಕ್ರಿಕೆಟಿಗ ಎಂ.ಎಸ್. ಧೋನಿ ಕುರಿತಾದ ಚಿತ್ರ ಹಾಗೂ ಕುಸ್ತಿ ಪಟು ಗೀತಾ ಫೋಗಟ್ ಕುರಿತಾದ ‘ದಂಗಲ್’ ಚಿತ್ರಗಳು ಯಶಸ್ವಿಯಾಗಿವೆ. ಈ ಹೊತ್ತಿನಲ್ಲಿ ತಮ್ಮದೂ ಚಿತ್ರವೊಂದು ಬರಲೆಂದು ತಾವು ಹಾರೈಸುತ್ತಿರುವುದಾಗಿ ಸಾಕ್ಷಿ ಹೇಳಿದ್ದಾರೆ.

ಹಾಗಾದಲ್ಲಿ, ತಮ್ಮ ಪಾತ್ರವನ್ನು ಇಂಥದ್ದೇ ನಟಿ ಮಾಡಬೇಕೆಂಬ ಹಂಬಲವೇನೂ ತಮಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

23 ವರ್ಷದ ಸಾಕ್ಷಿ, ರಿಯೊ ಒಲಿಂಪಿಕ್'ನಲ್ಲಿ ಮಹಿಳೆ ಕುಸ್ತಿಯಲ್ಲಿ ಪದಕ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.