ಹಾಗಾಗಿ ಈ ಸಾಧಕರ ಸಿನೆಮಾ ನಿರ್ಮಿಸಲು 12 ಕೋಟಿ ರು.ಗಳನ್ನು ಮೀಸಲಿಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ನವದೆಹಲಿ(ಜ.08): ಸರ್ಕಾರಿ ಸ್ವಾಮ್ಯದ ಕ್ರೀಡಾ ಚಾನೆಲ್ ಡಿಡಿ ಸ್ಪೋರ್ಟ್ಸ್ ಭಾರತೀಯ ಒಲಿಂಪಿಕ್ ಪಟುಗಳನ್ನು ಆಧರಿಸಿದ ಚಲನಚಿತ್ರಗಳನ್ನು ತಯಾರಿಸಲು ಸಿದ್ಧತೆ ನಡೆಸಿದೆ ಎಂದು ‘ಸ್ಪೋರ್ಟ್ಸ್ ಕೀಡಾ’ ವರದಿ ಮಾಡಿದೆ.

ಹಾಕಿ ದಂತಕತೆ ಧ್ಯಾನ್‌'ಚಂದ್, ಟೆನಿಸಿಗ ಲಿಯಾಂಡರ್ ಪೇಸ್, ವೇಟ್‌'ಲಿಫ್ಟರ್ ಕರ್ಣಂ ಮಲ್ಲೇಶ್ವರಿ, ಅಥ್ಲೀಟ್‌ಗಳಾದ ಪಿ ಟಿ ಉಷಾ, ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್, ಹಾಗೂ ಬ್ಯಾಡ್ಮಿಂಟನ್ ಆಟಗಾರ್ತಿಯರಾದ ಸೈನಾ ನೆಹ್ವಾಲ್ ಹಾಗೂ ಪಿ ವಿ ಸಿಂಧು ಮೇಲೆ ಚಿತ್ರಗಳನ್ನು ತೆಗೆಯಲು ಕೇಂದ್ರ ಕ್ರೀಡಾ ಮತ್ತು ಯುವ ಜನಸೇವಾ ಇಲಾಖೆ ನಿರ್ಧರಿಸಿದೆ ಎನ್ನಲಾಗಿದೆ.

ಹಾಗಾಗಿ ಈ ಸಾಧಕರ ಸಿನೆಮಾ ನಿರ್ಮಿಸಲು 12 ಕೋಟಿ ರು.ಗಳನ್ನು ಮೀಸಲಿಟ್ಟಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.