2006ರಲ್ಲಿ ಸೆಹ್ವಾಗ್ ವೆಸ್ಟ್'ಇಂಡೀಸ್ ವಿರುದ್ಧ 25.3 ಓವರ್'ಗಳಲ್ಲಿ ಮೂರಂಕಿಯ ಮೊತ್ತವನ್ನು ಮುಟ್ಟಿ ಅತಿವೇಗದಲ್ಲಿ ಟೆಸ್ಟ್ ಶತಕ ಬಾರಿಸಿದ ದಾಖಲೆ ಬರೆದಿದ್ದಾರೆ.

ಸಿಡ್ನಿ(ಜ.03): ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್'ಮನ್ ಡೇವಿಡ್ ವಾರ್ನರ್ ಪಾಕಿಸ್ತಾನದ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಸಿಡ್ನಿ ಕ್ರಿಕೆಟ್ ಮೈದಾನದಲ್ಲೇ ಮೂರನೇ ಹಾಗೂ ಟೆಸ್ಟ್ ಕ್ರಿಕೆಟ್'ನಲ್ಲಿ ಒಟ್ಟಾರೆ 18ನೇ ಶತಕವನ್ನು ವಾರ್ನರ್ ಪೂರೈಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರಂಭದಿಂದಲೂ ಸ್ಪೋಟಕ ಬ್ಯಾಟಿಂಗ್ ನಡೆಸಿದ ವಾರ್ನರ್ 78 ಎಸೆತಗಳಲ್ಲಿ ಶತಕ ಪೂರೈಸಿದರು. ಅವರ ಈ ಸೊಗಸಾದ ಇನಿಂಗ್ಸ್'ನಲ್ಲಿ 17 ಭರ್ಜರಿ ಬೌಂಡರಿಗಳೂ ಸೇರಿದ್ದವು. ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್'ಮನ್ ನಂತರ ಮೊದಲ ದಿನದ ಮೊದಲ ಸೆಷನ್'ನಲ್ಲೇ ಶತಕ ಬಾರಿಸಿದ ಆಸ್ಟ್ರೇಲಿಯಾದ ಮೊದಲ ಆರಂಭಿಕ ಆಟಗಾರ ಎಂಬ ಖ್ಯಾತಿಗೆ ವಾರ್ನರ್ ಭಾಜನರಾಗಿದ್ದಾರೆ. 87 ವರ್ಷಗಳ ಹಿಂದೆ ಡಾನ್. ಬ್ರಾಡ್'ಮನ್ ಮೊದಲ ದಿನದ ಮೊದಲ ಸೆಷನ್'ನಲ್ಲಿಯೇ ಶತಕ ಬಾರಿಸಿದ್ದರು.

ಆದರೆ ವಾರ್ನರ್ ಭಾರತದ ಸ್ಫೋಟಕ ಬ್ಯಾಟ್ಸ್'ಮನ್ ಸೆಹ್ವಾಗ್ ನಿರ್ಮಿಸಿದ ದಾಖಲೆ ಮುರಿಯುವಲ್ಲಿ ವಿಫಲರಾದರು. 2006ರಲ್ಲಿ ಸೆಹ್ವಾಗ್ ವೆಸ್ಟ್'ಇಂಡೀಸ್ ವಿರುದ್ಧ 25.3 ಓವರ್'ಗಳಲ್ಲಿ ಮೂರಂಕಿಯ ಮೊತ್ತವನ್ನು ಮುಟ್ಟಿ ಅತಿವೇಗದಲ್ಲಿ ಟೆಸ್ಟ್ ಶತಕ ಬಾರಿಸಿದ ದಾಖಲೆ ಬರೆದಿದ್ದಾರೆ. ಈ ಮೂಲಕ ಮೊದಲ ಸೆಷನ್'ನಲ್ಲಿ ಅತಿವೇಗವಾಗಿ ಶತಕ ಗಳಿಸಿದ ಆಟಗಾರ ಎಂಬ ದಾಖಲೆ ನಿ ಆದರೆ ವಾರ್ನರ್ ಶತಕ ಪೂರೈಸಲು ತೆಗೆದುಕೊಂಡದ್ದು 26.2 ಓವರ್'ಗಳು. ಹೀಗಾಗಿ ಸ್ವಲ್ಪದರಲ್ಲೇ ವಾರ್ನರ್ ಡೆಲ್ಲಿ ಡ್ಯಾಶರ್ ದಾಖಲೆ ಮುರಿಯುವಲ್ಲಿ ಎಡವಿದರು.