ಅಭಿಮಾನಿಗಳು ವಾರ್ನರ್ ಅವರನ್ನು ಸುತ್ತುವರಿಯುತ್ತಿದ್ದಂತೆ ಪುತ್ರಿ ಸಿಟ್ಟು ಮಾಡಿಕೊಂಡು ಟಿಕ್-ಟ್ಯಾಕ್ ಎಸೆದ ದೃಶ್ಯವೂ ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ.
ಬೆಂಗಳೂರು(ಮಾ.04): ಭಾರತ ಪ್ರವಾಸದಲ್ಲಿರುವ ಆಸೀಸ್ ಕ್ರಿಕೆಟಿಗರು ಒಂದಲ್ಲಾ ಒಂದು ಬಗೆಯಲ್ಲಿ ಸುದ್ದಿಯಾಗುತ್ತಿದ್ದಾರೆ.
ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಗುರುವಾರವಷ್ಟೇ ಆಟೋ ರಿಕ್ಷಾ ಚಾಲಿಸಿ ಸದ್ದು ಮಾಡಿದರೆ, ಆರಂಭಿಕ ಆಟಗಾರ ಡೇವಿಡ್ ವಾರ್ನರ್ ತನ್ನ ಕುಟುಂಬದೊಟ್ಟಿಗೆ ವಾಯು ವಿಹಾರ ನಡೆಸಿ ಗಮನ ಸೆಳೆದರು.
ರೆಸಿಡೆನ್ಸಿ ರಸ್ತೆಯಲ್ಲಿನ ಹೊಟೇಲ್'ನಲ್ಲಿ ವಾಸ್ತವ್ಯ ಹೂಡಿರುವ ವಾರ್ನರ್ ತಮ್ಮ ಪತ್ನಿ ಕಾನ್'ಡೈಸ್ ಮತ್ತು ಪುತ್ರಿ ಲೆವಿಯೊಂದಿಗೆ ಹೊಟೇಲ್'ನ ಹೊರಾಂಗಣದಲ್ಲಿ ವಾಯು ವಿಹಾರ ನಡೆಸುತ್ತಿದ್ದಾಗ ದಾರಿಹೋಕರು ಅವರೊಂದಿಗೆ ಸೆಲ್ಫೀ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು.
ಈ ವೇಳೆ ಪುತ್ರಿ ಲೆವಿಯನ್ನೂ ವಾರ್ನರ್ ಮರೆಯುವಂತಾಯಿತು. ಅಭಿಮಾನಿಗಳು ವಾರ್ನರ್ ಅವರನ್ನು ಸುತ್ತುವರಿಯುತ್ತಿದ್ದಂತೆ ಪುತ್ರಿ ಸಿಟ್ಟು ಮಾಡಿಕೊಂಡು ಟಿಕ್-ಟ್ಯಾಕ್ ಎಸೆದ ದೃಶ್ಯವೂ ಕ್ಯಾಮರ ಕಣ್ಣಲ್ಲಿ ಸೆರೆಯಾಗಿದೆ.
ಆದರೆ, ಸ್ವಲ್ಪ ದೂರದಲ್ಲಿದ್ದ ವಾರ್ನರ್ ಪತ್ನಿ ಕಾನ್'ಡೈಸ್ ವಿಡಿಯೋದಲ್ಲಿ ಇದನ್ನೆಲ್ಲಾ ಸೆರೆ ಹಿಡಿದು ಟ್ವೀಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
