ಟಿ20ಯಲ್ಲಿ ಇದು 3ನೇ ಅತಿವೇಗದ ಶತಕ. ಐಪಿಎಲ್‌ನಲ್ಲಿ ಕ್ರಿಸ್ ಗೇಲ್ 30, ಇಂಗ್ಲೆಂಡ್ ಕೌಂಟಿಯಲ್ಲಿ ಆ್ಯಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕ ಬಾರಿಸಿದ್ದರು.

ಪಾಟ್‌ಶೆಫ್‌ಸ್ಟ್ರೂಮ್(ಅ.29): ಅಂತರರಾಷ್ಟ್ರೀಯ ಟಿ20ಯಲ್ಲಿ ಹೊಸ ದಾಖಲೆ ಸೃಷ್ಟಿಯಾಗಿದೆ. ದಕ್ಷಿಣ ಆಫ್ರಿಕಾದ ಸ್ಫೋಟಕ ಬ್ಯಾಟ್ಸ್'ಮನ್ ಡೇವಿಡ್ ಮಿಲ್ಲರ್ ವೇಗದ ಶತಕ ದಾಖಲಿಸಿ ಇತಿಹಾಸ ನಿರ್ಮಿಸಿದ್ದಾರೆ.

ಇಂದು ಬಾಂಗ್ಲಾದೇಶ ವಿರುದ್ಧ ನಡೆದ 2ನೇ ಟಿ20 ಪಂದ್ಯದಲ್ಲಿ ಮಿಲ್ಲರ್ ಕೇವಲ 35 ಎಸೆತಗಳಲ್ಲಿ 100 ರನ್ ಸಿಡಿಸಿ ತಮ್ಮ ದೇಶದವರೇ ಆದ ರಿಚರ್ಡ್ ಲೆವಿ ದಾಖಲಿಸಿದ್ದ 45 ಎಸೆತಗಳ ದಾಖಲೆಯನ್ನು ಮುರಿದಿದ್ದಾರೆ. ಟಿ20ಯಲ್ಲಿ ಇದು 3ನೇ ಅತಿವೇಗದ ಶತಕ. ಐಪಿಎಲ್‌ನಲ್ಲಿ ಕ್ರಿಸ್ ಗೇಲ್ 30, ಇಂಗ್ಲೆಂಡ್ ಕೌಂಟಿಯಲ್ಲಿ ಆ್ಯಂಡ್ರೂ ಸೈಮಂಡ್ಸ್ 34 ಎಸೆತಗಳಲ್ಲಿ ಶತಕ ಬಾರಿಸಿದ್ದರು.