ಐಪಿಎಲ್‌ ನಿಯಾಮ​ವಳಿಯ ಪ್ರಕಾರ ಪ್ರತಿ ಆಟಗಾರ ತನ್ನ ಹೆಸರು ಹಾಗೂ ಸಂಖ್ಯೆ ಸರಿಯಾಗಿ ಕಾಣುವಂತೆ ಜೆರ್ಸಿ ತೊಡಬೇಕು. ಹೀಗಾಗಿ, ಕ್ರಿಸ್ಟಿಯನ್ ವಿರುದ್ಧ ಐಪಿಎಲ್‌ ಅಡಳಿತ ಮಂಡಳಿ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.

ನವದೆಹಲಿ(ಮೇ.05): ಬುಧವಾರ ರಾತ್ರಿ ಕೋಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಸಿಕ್ಸರ್‌ ಸಿಡಿಸಿ ಪುಣೆ ತಂಡಕ್ಕೆ ಗೆಲುವು ತಂದುಕೊಟ್ಟಿದ್ದ ಡ್ಯಾನ್‌ ಕ್ರಿಸ್ಟಿಯನ್ ವಿಚಿತ್ರ ಕಾರಣದಿಂದಾಗಿ ಕ್ರಮ ಎದುರಿಸುವ ಆತಂಕಕ್ಕೆ ಸಿಲುಕಿದ್ದಾರೆ.

ಕ್ರೀಸ್‌'ಗಿಳಿಯುವ ಆತುರದಲ್ಲಿ ಕ್ರಿಸ್ಟಿಯನ್, ಬೆನ್‌ ಸ್ಟೋಕ್ಸ್‌ ಅವರ ಜೆರ್ಸಿ ತೊಟ್ಟು ಮೈದಾನಕ್ಕಿಳಿದಿದ್ದು ರೆಫ್ರಿ ಕೆಂಗಣ್ಣಿಗೆ ಕಾರಣವಾಗಿದೆ. ಆಸ್ಪ್ರೇಲಿಯಾದ ಆಲ್ರೌಂಡರ್‌ ಸ್ವತಃ ತಾವೇ ಟ್ವಿಟರ್‌'ನಲ್ಲಿ ತಪ್ಪೊಪ್ಪಿಕೊಂಡಿದ್ದಾರೆ.

‘‘ಬೌಲಿಂಗ್‌ ನಂತರ ನಾನು ಹಾಗೂ ಸ್ಟೋಕ್ಸ್‌ ಪಕ್ಕಪಕ್ಕದಲ್ಲಿ ಜೆರ್ಸಿಗಳನ್ನು ಒಣಗಲು ಹಾಕಿದ್ದೆವು. ಆತುರದಲ್ಲಿ ನಾನು ಅವರ ಜೆರ್ಸಿ ತೊಟ್ಟು ಕ್ರೀಸ್‌ಗಿಳಿದುಬಿಟ್ಟೆ'' ಎಂದು ಕ್ರಿಸ್ಟಿಯನ್ ಬರೆದಿದ್ದಾರೆ.

Scroll to load tweet…

ಐಪಿಎಲ್‌ ನಿಯಾಮ​ವಳಿಯ ಪ್ರಕಾರ ಪ್ರತಿ ಆಟಗಾರ ತನ್ನ ಹೆಸರು ಹಾಗೂ ಸಂಖ್ಯೆ ಸರಿಯಾಗಿ ಕಾಣುವಂತೆ ಜೆರ್ಸಿ ತೊಡಬೇಕು. ಹೀಗಾಗಿ, ಕ್ರಿಸ್ಟಿಯನ್ ವಿರುದ್ಧ ಐಪಿಎಲ್‌ ಅಡಳಿತ ಮಂಡಳಿ ಕ್ರಮಕೈಗೊಳ್ಳುವ ಸಾಧ್ಯತೆ ಇದೆ.