ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ  ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಗೂ ವಿಕಾಸ್  ಭಾಜನರಾಗಿದ್ದರು.

ನವದೆಹಲಿ(ಮೇ.30): ಭಾರತದ ಖ್ಯಾತ ಥ್ರೋ ಆಟಗಾರ, ಕಾಮನ್ ವೆಲ್ತ್ ಚಿನ್ನದ ಪದಕ ವಿಜೇತ ಕನ್ನಡಿಗ ವಿಕಾಸ್ ಗೌಡ ತಮ್ಮ ವೃತ್ತಿಪರ ಕ್ರೀಡೆಗೆ ವಿದಾಯ ಹೇಳಿದ್ದಾರೆ.
15 ವರ್ಷಕ್ಕೂ ಹೆಚ್ಚು ಕಾಲ ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಸ್ಪರ್ಧಿಸಿರುವ 34ರ ಹರೆಯದ ವಿಕಾಸ್ ಗೌಡ ಇಂದು ಅಧಿಕೃತವಾಗಿ ನಿವೃತ್ತಿ ಘೋಷಿಸಿದರು.
ಗ್ಲಾಸ್ಗೊ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಡಿಸ್ಕಸ್ ಥ್ರೋ ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊದಲ ಪುರುಷ ಅಥ್ಲೀಟ್ ಎಂಬ ಕೀರ್ತಿಗೂ ವಿಕಾಸ್ ಭಾಜನರಾಗಿದ್ದರು. 2 ಏಷ್ಯನ್ ಕ್ರೀಡಾಕೂಟದಲ್ಲಿ 1 ಬೆಳ್ಳಿ, ಒಂದು ಕಂಚು ಗೆದ್ದಿದ್ದರು. ಕ್ರೀಡಾ ವಿಭಾಗದಲ್ಲಿ ವಿಕಾಸ್ ಸಾಧನೆಯನ್ನು ಪರಿಗಣಿಸಿದ ಕೇಂದ್ರ ಸರ್ಕಾರ 2017ರಲ್ಲಿ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು.

Scroll to load tweet…