‘ರಾಷ್ಟೀಯ ಕ್ರೀಡಾ ಪ್ರಾಧಿಕಾರದ ಕ್ಯಾಂಟೀನ್‌'ನಲ್ಲಿ ಪ್ರತಿಯೊಂದು ಕ್ರೀಡೆಯ ಕ್ರೀಡಾಪಟುಗಳಿಗೆ ವಿವಿಧ ಆಹಾರವನ್ನು ಪೂರೈಸುವಂತೆ ಸೂಚಿಸಲಾಗಿದೆ. ಲಿಫ್ಟರ್‌ಗಳಿಗೆ ಹೆಚ್ಚಾಗಿ ಮಟನ್, ಹಂದಿ ಮಾಂಸ ಹಾಗೂ ಜರ್ಮನಿಯಿಂದ ತರಿಸಿದ ಪೌಷ್ಟಿಕಾಂಶ ಪೂರಕಗಳನ್ನು ನೀಡಲಾಗುತ್ತಿದೆ.
ಗೋಲ್ಡ್'ಕೋಸ್ಟ್(ಏ.11): ಕಾಮನ್ವೆಲ್ತ್ ಗೇಮ್ಸ್ನಲ್ಲಿ ದಾಖಲೆ ಪದಕ ಬೇಟೆಯಾಡಿರುವ ವೇಟ್ಲಿಫ್ಟರ್ಗಳ ಯಶಸ್ಸಿನ ರಹಸ್ಯವನ್ನು ತಂಡದ ಕೋಚ್ ವಿಜಯ್ ಶರ್ಮಾ ಬಿಚ್ಚಿಟ್ಟಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಪ್ರತಿ ವರ್ಷ 500ಕ್ಕೂ ಹೆಚ್ಚು ಡೋಪಿಂಗ್ ಟೆಸ್ಟ್'ಗೆ ಒಳಗಾಗುತ್ತಿರುವ ಲಿಫ್ಟರ್'ಗಳು ಜರ್ಮನಿಯಿಂದ ತರಿಸಿದ ವಿಶೇಷ ಪೌಷ್ಟಿಕಾಂಶ ಪೂರಕಗಳು ಸೇವಿಸುತ್ತಿದ್ದಾರೆ. ‘ರಾಷ್ಟೀಯ ಕ್ರೀಡಾ ಪ್ರಾಧಿಕಾರದ ಕ್ಯಾಂಟೀನ್'ನಲ್ಲಿ ಪ್ರತಿಯೊಂದು ಕ್ರೀಡೆಯ ಕ್ರೀಡಾಪಟುಗಳಿಗೆ ವಿವಿಧ ಆಹಾರವನ್ನು ಪೂರೈಸುವಂತೆ ಸೂಚಿಸಲಾಗಿದೆ. ಲಿಫ್ಟರ್ಗಳಿಗೆ ಹೆಚ್ಚಾಗಿ ಮಟನ್, ಹಂದಿ ಮಾಂಸ ಹಾಗೂ ಜರ್ಮನಿಯಿಂದ ತರಿಸಿದ ಪೌಷ್ಟಿಕಾಂಶ ಪೂರಕಗಳನ್ನು ನೀಡಲಾಗುತ್ತಿದೆ.
ಕಳೆದ 4 ವರ್ಷಗಳಲ್ಲಿ ರಾಷ್ಟ್ರೀಯ ಶಿಬಿರದ ವೇಳೆ ಯಾರೂ ಸಹ 10-12ಕ್ಕಿಂತ ಹೆಚ್ಚು ದಿನಗಳ ರಜೆ ಪಡೆದಿಲ್ಲ. ಪ್ರತಿ ವರ್ಷ 500ಕ್ಕೂ ಹೆಚ್ಚು ಡೋಪಿಂಗ್ ಪರೀಕ್ಷೆ ನಡೆಸುತ್ತೇವೆ. ನಿಷೇಧಿತ ಮದ್ದು ಸೇವನೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದ್ದೇವೆ’ ಎಂದು ವಿಜಯ್ ಶರ್ಮಾ ಹೇಳಿದ್ದಾರೆ.
