ಪುಣೆ(ಏ.28): ಅಂಬಾಟಿ ರಾಯುಡು ಹಾಗೂ ಸುರೇಶ್ ರೈನಾ ಅವರ ಸ್ಫೋಟಕ ಆಟದಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ 170 ರನ್’ಗಳ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದ ಮುಂಬೈ ತಂಡದ ರೋಹಿತ್ ಶರ್ಮಾ  ಚೆನ್ನೈ ತಂಡವನ್ನು ಬ್ಯಾಟಿಂಗ್’ಗೆ ಆಹ್ವಾನಿಸಿದರು. ಆರಂಭಿಕ ಆಟಗಾರ ವ್ಯಾಟ್ಸ್’ನ್ 4ನೇ ಓವರ್’ನಲ್ಲಿ ಕೆ. ಪಾಂಡ್ಯಾಗೆ ಔಟಾದರು. ನಂತರ 7 ಓವರ್’ಗಳ ಕಾಲ ಆರ್ಭಟಿಸಿದ ರಾಯುಡು(46, 35 ಎಸೆತ, 4 ಸಿಕ್ಸ್’ರ್, 2 ಬೌಂಡರಿ ), ರೈನಾ 2ನೇ ವಿಕೆಟ್’ಗೆ  11.2 ಓವರ್’ಗಳಲ್ಲಿ 97 ರನ್ ಪೇರಿಸಿದರು.
8 ಓವರ್’ಗಳಿದ್ದಂತೆ ಆಗಮಿಸಿದ ನಾಯಕ ಧೋನಿ(26) ರೈನಾ ಜೊತೆ ಸೇರಿ ಬಿರುಸಿನ ಆಟವಾಡಿದರು. ಅಜೇಯವಾಗಿ 75 ರನ್ ಸಿಡಿಸಿದ ರೈನಾ ಆಟದಲ್ಲಿ 4ಸಿಕ್ಸ್’ರ್ ಹಾಗೂ 6 ಬೌಂಡರಿಗಳಿದ್ದವು.  ಅಂತಿಮವಾಗಿ ಚೆನ್ನೈ 20 ಓವರ್’ಗಳಲ್ಲಿ 169/5 ರನ್ ದಾಖಲಿಸಿತು. ಮುಂಬೈ ಪರ ಕೆ.ಪಾಂಡ್ಯಾ ಹಾಗೂ ಮ್ಯಾಕ್ಲೇಗಾನ್ ತಲಾ 2 ವಿಕೇಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. 

ಸ್ಕೋರ್ 
ಚೆನ್ನೈ ಸೂಪರ್ ಕಿಂಗ್ಸ್ 20  ಓವರ್’ಗಳಲ್ಲಿ 169/5
(ರೈನಾ ಅಜೇಯ 75 , ರಾಯುಡು 46, ಧೋನಿ 26)

ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯ
(ವಿವರ ಅಪೂರ್ಣ)