ಫುಟ್ಬಾಲ್ ಸ್ಟಾರ್ ಪ್ಲೇಯರ್ ಕ್ರಿಸ್ಟಿಯಾನೋ ರೋನಾಲ್ಡೋರನ್ನ ಭೇಟಿಯಾಗಬೇಕು ಅನ್ನೋದು ಎಲ್ಲಾ ಫುಟ್ಬಾಲ್ ಪ್ರೇಮಿಗಳ ಕನಸು. ಹೀಗೆ ರೋನಾಲ್ಡೋ ಭೇಟಿಗಾಗಿ ಕಣ್ಣೀರು ಹಾಕುತ್ತಿದ್ದ ಪುಟಾಣಿ ಅಭಿಮಾನಿಗೆ ರೋನಾಲ್ಡೋ ಸರ್ಪ್ರೈಸ್ ನೀಡಿದರು.
ಮಾಸ್ಕೋ(ಜೂ.19): ಫಿಫಾ ವಿಶ್ವಕಪ್‌ನ ಆಕರ್ಷಣೆಯಾಗಿರುವ ಪೋರ್ಚುಗಲ್ ನಾಯಕ ಕ್ರಿಸ್ಟಿಯಾನೋ ರೊನಾಲ್ಡೋ, ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ. ರೋನಾಲ್ಡೋ ಭೇಟಿಗಾಗಿ ಕಾಯುತ್ತಿದ್ದ ಪುಟಾಣಿ ಅಭಿಮಾನಿಯನ್ನ ರೋನಾಲ್ಡೋ ಭೇಟಿ ಮಾಡೋ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ಆಟಗಾರನಾಗಿರುವ ರೊನಾಲ್ಡೋ ಭೇಟಿಗಾಗಿ ಇತ್ತೀಚೆಗೆ ಇಲ್ಲಿನ ಹೋಟೆಲ್ ಮುಂದೆ ಬಾಲಕನೊಬ್ಬ ತನ್ನ ತಾಯಿಯೊಂದಿಗೆ ಕಾಯುತ್ತಿದ್ದ. ಪೋರ್ಚುಗಲ್ ತಂಡದ ಬಸ್ ಇನ್ನೇನು ಹೋಟೆಲ್‌ನಿಂದ ಹೊರಡವುದರಲ್ಲಿತ್ತು. ವಿಷಯ ತಿಳಿದ ರೊನಾಲ್ಡೋ, ಬಸ್‌ನಿಂದ ಕೆಳಗಿಳಿದು ಬಂದು ಅಭಿಮಾನಿಯನ್ನು ಮುದ್ದಾಡಿದರು.
ಪುಟಾಣಿ ಅಭಿಮಾನಿಯನ್ನ ತಬ್ಬಿಕೊಂಡ ರೋನಾಲ್ಡೋ, ಆತನೊಂದಿಗೆ ಫೋಟೋ ತೆಗಿಸಿಕೊಂಡು, ಶರ್ಟ್ ಮೇಲೆ ಹಸ್ತಾಕ್ಷರ ನೀಡಿದರು. ತನ್ನ ನೆಚ್ಚಿನ ಆಟಗಾರನನ್ನು ಭೇಟಿಯಾದ ಬಾಲಕನ ಸಂತಸಕ್ಕೆ ಪಾರವೇ ಇರಲಿಲ್ಲ. ಈ ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
