ಇದು ಆಟಗಾರರ ದೈಹಿಕ ಸಾಮರ್ಥ್ಯದ ಪಾಸ್‌ಪೋರ್ಟ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ವಾಡಾ ತಿಳಿಸಿದೆ.
ಮುಂಬೈ(ಫೆ.04): ಭಾರತ ಕ್ರಿಕೆಟ್ ತಂಡ ಸೇರಿದಂತೆ ಎಲ್ಲಾ ತಂಡಗಳ ಆಟಗಾರರು ಮುಂಬರುವ ಜೂನ್'ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಗೂ ಮುನ್ನ ಇದೇ ಮೊದಲ ಬಾರಿಗೆ ವಿಶ್ವ ಉದ್ದೀಪನಾ ಮದ್ದು ವಿರೋಧಿ ಘಟಕ ನಡೆಸುವ ರಕ್ತ ಮಾದರಿ ಪರೀಕ್ಷೆಗೆ ಒಳಗಾಗಲಿದ್ದಾರೆ.
ವಾಡಾ ‘ಸ್ಮಾರ್ಟ್ ಪರೀಕ್ಷೆ’ಗೆ ಆಟಗಾರರನ್ನು ತಪಾಸಣೆಗೊಳಪಡಿಸುವ ಕಾರ್ಯ ಯೋಜನೆ ರೂಪಿಸಿದೆ. ಇದು ಆಟಗಾರರ ದೈಹಿಕ ಸಾಮರ್ಥ್ಯದ ಪಾಸ್ಪೋರ್ಟ್ ಆಗಿ ಕಾರ್ಯನಿರ್ವಹಿಸಲಿದೆ ಎಂದು ವಾಡಾ ತಿಳಿಸಿದೆ.
ಈ ಬಗ್ಗೆ ಭಾರತ ಕ್ರಿಕೆಟ್ ತಂಡದ ಆಟಗಾರರಿಗೆ, ಕಳೆದ ತಿಂಗಳು ಇಂಗ್ಲೆಂಡ್ ವಿರುದ್ಧದ ಪುಣೆಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ಐಸಿಸಿ ಡೋಪಿಂಗ್ ತಂಡ ಮಾಹಿತಿ ನೀಡಿತ್ತು.
