Asianet Suvarna News Asianet Suvarna News

ಪದ್ಮಾವತಿ ಚಿತ್ರದ ವಿರುದ್ಧ ಹೋರಾಡಿದ ಸಂಘಟನೆಗೆ ಕ್ರಿಕೆಟಿಗನ ಪತ್ನಿ ಮುಖ್ಯಸ್ಥೆ!

ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿ ಬಹಿರಂಗವಾಗಿ ಹೆಚ್ಚಾಗಿ ಕಾಣಿಸಿಕೊಂಡರವರಲ್ಲ. ಇತರ ಕ್ರಿಕೆಟಿಗರ ಪತ್ನಿಯರಂತೆ ಮೈದಾನಕ್ಕೆ ಆಗಮಿಸಿ  ಪಂದ್ಯ ವಿಕೀಕ್ಷಿಸಿದ ಸಂದರ್ಭ ತೀರಾ ಕಡಿಮೆ. ಇಷ್ಟು ದಿನ ತೆರೆ ಹಿಂದಿದ್ದ ಜಡೇಜಾ ಪತ್ನಿ ಇದೀಗ ಕರ್ಣಿ ಸೇನಾ ಸಂಘಟನೆ ಮುಖ್ಯಸ್ಥೆಯಾಗಿ ನೇಮಕಗೊಂಡಿದ್ದಾರೆ.

Cricketer Ravindra Jadeja Wife appointed as a head of Karni sena Women wing in Gujarat
Author
Bengaluru, First Published Oct 22, 2018, 11:12 AM IST
  • Facebook
  • Twitter
  • Whatsapp

ಗುಜರಾತ್(ಅ.22): ಪದ್ಮಾವಚಿ ಚಿತ್ರ ಬಿಡುಗಡೆ ಭಾರಿ ವಿರೋಧ ವ್ಯಕ್ತಪಡಿಸೋ ಮೂಲಕ ದೇಶದಲ್ಲೇ ಸುದ್ದಿಯಾದ ಕರ್ಣಿ ಸೇನಾ ಸಂಘಟನೆ ಇದೀಗ ಗುಜರಾತ್ ಘಟಕಕ್ಕೆ ಹೊಸ ಮುಖ್ಯಸ್ಥರನ್ನಾಗಿ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾ ಸೋಲಂಕಿಯನ್ನ ನೇಮಕ ಮಾಡಿದೆ.

ಗುಜರಾತ್, ರಾಜಸ್ಥಾನ ಸೇರಿದಂತೆ ಹಲವು ಕಡೆಗಳಲ್ಲಿ ಬಲಿಷ್ಠವಾಗಿರುವ ಕರ್ಣಿ ಸೇನಾ ಸಂಘಟನೆ ಇದೀಗ ರಿವಾ ಸೋಲಂಕಿಯನ್ನ ನೇಮಕ ಮಾಡೋ ಮೂಲಕ  ಮಹತ್ವದ ಹೆಜ್ಜೆ ಇಟ್ಟಿದೆ.  ಸಂಘಟನೆಯ ರಾಷ್ಟ್ರೀಯ ಮುಖ್ಯಸ್ಥ ಮಹಿಪಾಲ್ ಸಿನ್ಹ ಮಕರಾನ ಈ ನೇಮಕ ಮಾಡಿದ್ದಾರೆ.

ಆಯ್ಕೆ ಕುರಿತು ಸಂತಸ ವ್ಯಕ್ತಪಡಿಸಿರುವ ಜಡೇಜಾ ಪತ್ನಿ ರಿವಾ ಸೋಲಂಕಿ, ಮಹಿಳೆಯರ ಹಕ್ಕಿಗಾಗಿ ಪ್ರಾಮಾಣಿಕಿ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ. ಕರ್ಣಿ ಸೇನಾ ಮುಖ್ಯಸ್ಥೆ ನೇಮಕ ವಿಚಾರ ಕುರಿತು ಈಗಾಗಲೇ ಪತಿ ರವೀಂದ್ರ ಜಡೇಜಾ ಬಳಿ ಚರ್ಚೆ ನಡೆಸಿದ್ದೇನೆ. ನಮ್ಮ ಸಮುದಾಯದ ಹೆಣ್ಣು ಮಕ್ಕಳಿಗಾಗಿ ಈ ಹುದ್ದೆ ಅಲಂಕರಿಸುತ್ತಿದ್ದೇನೆ ಎಂದು ರಿವಾ ಹೇಳಿದರು.

ಇದೇ ವೇಳೆ ರಾಜಕೀಯ ಪ್ರವೇಶ ಕುರಿತು ಈಗಲೇ ಏನೂ ಹೇಳುವುದಿಲ್ಲ ಎಂದು ರಿವಾ ಹೇಳಿದ್ದಾರೆ. ಈ ಮೂಲಕ ಭವಿಷ್ಯದಲ್ಲಿ ರಾಜಕೀಯಕ್ಕೆ ಎಂಟ್ರಿ ಕೊಡೋ ಸೂಚನೆ ನೀಡಿದ್ದಾರೆ.  ಮೆಕಾನಿಕಲ್ ಇಂಜಿನಿಯರ್ ಆಗಿದ್ದ ರಿವಾ ಸೋಲಂಕಿ 2016ರಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾರನ್ನ ವರಿಸಿದರು.

ಬಾಲಿವುಡ್ ಪದ್ಮಾವತಿ ಚಿತ್ರ ನಿರ್ಮಾಣ ಹಾಗೂ ಬಿಡುಗಡೆಗೆ ಕರ್ಣಿ ಸೇನಾ ಸಂಘಟನೆ ಭಾರಿ ವಿರೋಧ ವ್ಯಕ್ತಪಡಿಸಿತ್ತು. ಚಿತ್ರದ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ವಿರುದ್ಧ ಪ್ರತಿಭಟನೆ ನಡೆಸಿತ್ತು. ಚಿತ್ರದ ಸೆಟ್ ಮೇಲೆ ದಾಳಿ ನಡೆಸಿತ್ತು. ಚಿತ್ರ ಬಿಡುಗಡೆಗೆ ಅಡ್ಡಿಪಡಿಸಿದ ಆರೋಪಗಳು ಈ ಸಂಘಟನೆ ಮೇಲಿದೆ. ಇದೀಗ ಇದೇ  ಇದೇ ಸಂಘಟನೆಯ ಗುಜರಾತ್ ಘಟಕದ ಮಹಿಳಾ ಮುಖ್ಯಸ್ಥೆಯಾಗಿ ಜಡೇಜಾ ಪತ್ನಿ ಆಯ್ಕೆಯಾಗಿರುುವುದ ಹಲವರ ಅಸಮಧಾನಕ್ಕೆ ಕಾರಣವಾಗಿದೆ.

Follow Us:
Download App:
  • android
  • ios