Asianet Suvarna News Asianet Suvarna News

ಮಿಥಾಲಿ ಸಂಭಾಳಿಸೋದೇ ಕಷ್ಟ: ಪವಾರ್ ತಿರುಗೇಟು

ಹಿರಿಯ ಆಟಗಾರ್ತಿ ಮಿಥಾಲಿ ಅವರೊಂದಿಗೆ ವೃತ್ತಿಪರ ಸಂಬಂಧ ಅತ್ಯಂತ ಪ್ರಯಾಸಕರವಾದದ್ದು. ಅಲ್ಲದೆ ನಾನು ಅವರನ್ನು ಬಹಳಷ್ಟು ಸಾರಿ ಇತರ ಆಟಗಾರರೊಂದಿಗೆ ಇರದೆ, ಪ್ರತ್ಯೇಕವಾಗಿರುವುದನ್ನು ನೋಡಿದ್ದೇನೆ. ಹಾಗಾಗಿ ಅವರನ್ನು ಸಂಭಾಳಿಸುವುದು ಅತ್ಯಂತ ಕಷ್ಟಕರ’ ಎಂದು ಬಿಸಿಸಿಐ ಪವಾರ್ ಎದುರು ಹೇಳಿದ್ದಾರೆ.

Cricketer Mithali Raj was aloof difficult to handle Ramesh Powar tells BCCI
Author
New Delhi, First Published Nov 29, 2018, 12:48 PM IST

ನವದೆಹಲಿ[ನ.29]: ’ಭಾರತ ಮಹಿಳಾ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್, ಸದಾ ಪ್ರತ್ಯೇಕವಾಗಿರಲು ಬಯಸುತ್ತಿದ್ದರು. ಹಾಗಾಗಿ ಟೂರ್ನಿಯ ವೇಳೆ ಅವರನ್ನು ಸಂಭಾಳಿಸೋದು ಕಷ್ಟವಾಗುತ್ತಿತ್ತು’ ಎಂದು ಭಾರತ ಮಹಿಳಾ ಕ್ರಿಕೆಟ್ ತಂಡದ ಕೋಚ್ ರಮೇಶ್ ಪೊವಾರ್ ತಿರುಗೇಟು ನೀಡಿದ್ದಾರೆ.

ಅಧಿಕಾರ ಬಳಸಿ ತಂಡದಿಂದ ಹೊರದಬ್ಬಲಾಗಿದೆ-ಬಿಸಿಸಿಐಗೆ ಮಿಥಾಲಿ ಪತ್ರ!

ಬಿಸಿಸಿಐ ಸಿಇಒ ರಾಹುಲ್ ಜೋಹ್ರಿ ಹಾಗೂ ಕ್ರಿಕೆಟ್ ಚಟುವಟಿಕೆಗಳ ಪ್ರಧಾನ ವ್ಯವಸ್ಥಾಪಕ ಸಾಬಾ ಕರೀಂ ಎದುರು ಹಾಜರಾಗಿದ್ದ ಕೋಚ್ ಪೊವಾರ್, ಮಿಥಾಲಿ ಅವರೊಂದಿಗೆ ವ್ಯವಹರಿಸುವುದು ಕಠಿಣ ಸಾಧ್ಯ’ ಎಂದು ಹೇಳಿದ್ದಾರೆ.

ಹರ್ಮನ್, ಮಿಥಾಲಿ ಜತೆ ಬಿಸಿಸಿಐ ಆಡಳಿತ ಸಮಿತಿ ಸಭೆ!

ಮಂಗಳವಾರವಷ್ಟೇ ಭಾರತ ತಂಡದ ಹಿರಿಯ ಆಟಗಾರ್ತಿ ಮಿಥಾಲಿ ರಾಜ್, ಟಿ20 ವಿಶ್ವಕಪ್ ಸೆಮಿಫೈನಲ್’ನಿಂದ ನಮ್ಮನ್ನು ಹೊರಗಿಡಲು ಕೋಚ್ ರಮೇಶ್ ಪೊವಾರ್ ಗರ್ವವೇ ಕಾರಣ. ಅಲ್ಲದೇ ನನ್ನನ್ನು ಬಹಳಷ್ಟು ಅವಮಾನಿಸಿರುವುದು ಸೇರಿದಂತೆ ಹಲವು ವಿಷಯಗಳ ಕುರಿತು ಆರೋಪಿಸಿ, ಬಿಸಿಸಿಐ ಅಧಿಕಾರಿಗಳಿಗೆ ಸುದೀರ್ಘ ಪತ್ರ ಬರೆದಿದ್ದರು. 

ಭಾರತ ಮಹಿಳಾ ತಂಡದಲ್ಲಿ ಭಿನ್ನಮತ ಸ್ಫೋಟ - ಶೀಘ್ರದಲ್ಲೇ ಮೇಜರ್ ಸರ್ಜರಿ!

ಹಿರಿಯ ಆಟಗಾರ್ತಿ ಮಿಥಾಲಿ ಅವರೊಂದಿಗೆ ವೃತ್ತಿಪರ ಸಂಬಂಧ ಅತ್ಯಂತ ಪ್ರಯಾಸಕರವಾದದ್ದು. ಅಲ್ಲದೆ ನಾನು ಅವರನ್ನು ಬಹಳಷ್ಟು ಸಾರಿ ಇತರ ಆಟಗಾರರೊಂದಿಗೆ ಇರದೆ, ಪ್ರತ್ಯೇಕವಾಗಿರುವುದನ್ನು ನೋಡಿದ್ದೇನೆ. ಹಾಗಾಗಿ ಅವರನ್ನು ಸಂಭಾಳಿಸುವುದು ಅತ್ಯಂತ ಕಷ್ಟಕರ’ ಎಂದು ಬಿಸಿಸಿಐ ಪವಾರ್ ಎದುರು ಹೇಳಿದ್ದಾರೆ.

ಟಿ20 ವಿಶ್ವಕಪ್ ಸೆಮಿಫೈನಲ್’ನಲ್ಲಿ ಮಿಥಾಲಿ ಕೈಬಿಟ್ಟಿರುವುದನ್ನು ಪೊವಾರ್ ಸಮರ್ಥಿಸಿಕೊಂಡಿದ್ದಾರೆ. ಮಿಥಾಲಿ ಬ್ಯಾಟಿಂಗ್ ಸ್ಟ್ರೈಕ್’ರೇಟ್ ಕಡಿಮೆ ಇದ್ದುದ್ದೇ  ಅವರನ್ನು ತಂಡದಿಂದ ಹೊರಗಿಡಲು ಕಾರಣ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow Us:
Download App:
  • android
  • ios