ನವದೆಹಲಿ[ಆ.07]: ಬಂಗಾಳ ಕ್ರಿಕೆಟ್‌ ತಂಡದ ನಾಯಕ ಮನೋಜ್‌ ತಿವಾರಿ, ದುಲೀಪ್‌ ಟ್ರೋಫಿಗೆ ತಮ್ಮನ್ನು ಆಯ್ಕೆ ಮಾಡದ್ದಕ್ಕೆ ಬಿಸಿಸಿಐ ಆಯ್ಕೆ ಸಮಿತಿ ವಿರುದ್ಧ ಕಿಡಿಕಾಡಿದ್ದಾರೆ. ಸರಣಿ ಟ್ವೀಟ್‌ ಮೂಲಕ ಆಕ್ರೋಶ ವ್ಯಕ್ತಪಡಿಸಿರುವ ಮನೋಜ್‌, ಆಯ್ಕೆಗೆ ಮಾನದಂಡಗಳೇನು ಎಂದು ಬಿಸಿಸಿಐ ಆಯ್ಕೆ ಸಮಿತಿಯನ್ನು  ಪ್ರಶ್ನಿಸಿದ್ದಾರೆ. 

ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್-ಗರಂ ಆದ ಟೀಂ ಇಂಡಿಯಾ ಕ್ರಿಕೆಟಿಗ!

‘ಕಳೆದ ಋುತುವಿನಲ್ಲಿ ನಾನು ಉತ್ತಮ ಪ್ರದರ್ಶನ ನೀಡಿದ್ದೇನೆ. ಹೊಸದಾಗಿ ಸೇರ್ಪಡೆಗೊಂಡ ತಂಡಗಳ ಪರ ಆಡಿದ ಕೆಲ ಆಟಗಾರರಿಗೆ ಸ್ಥಾನ ನೀಡಲಾಗಿದೆ. ಗುಣಮಟ್ಟದ ಬೌಲಿಂಗ್‌ ಪಡೆ ಹೊಂದಿರುವ ತಂಡಗಳ ವಿರುದ್ಧ ನಾನು ದ್ವಿಶತಕ, ಶತಕ ಬಾರಿಸಿದ್ದೇನೆ. ಆಯ್ಕೆ ಪ್ರಕ್ರಿಯೆ ಹೇಗೆ ನಡೆಯುತ್ತಿದೆ ಎನ್ನುವ ಬಗ್ಗೆ ಸ್ಪಷ್ಟತೆಗೆ ಆಗ್ರಹಿಸುತ್ತೇನೆ’ ಎಂದು ತಿವಾರಿ ಟ್ವೀಟ್‌ ಮಾಡಿದ್ದಾರೆ.

ದುಲೀಪ್‌ ಟ್ರೋಫಿ 2019: ಮೂವರು ಕನ್ನಡಿಗರಿಗೆ ಸ್ಥಾನ

2015ರಲ್ಲಿ ಜಿಂಬಾಬ್ವೆ ವಿರುದ್ದ ಮನೋಜ್ ತಿವಾರಿ ಕಡೆಯ ಬಾರಿಗೆ ಏಕದಿನ ಪಂದ್ಯದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. 2019ರ ಐಪಿಎಲ್ ಹರಾಜಿನಲ್ಲೂ ಯಾವೊಬ್ಬ ಪ್ರಾಂಚೈಸಿಯೂ ಮನೋಜ್ ಖರೀದಿಸುವ ಮನಸು ಮಾಡಿರಲಿಲ್ಲ. ಅಂದಹಾಗೆ ದುಲೀಪ್ ಟ್ರೋಫಿ ಟೂರ್ನಿಯು ಆಗಸ್ಟ್ 17ರಿಂದ ಆರಂಭವಾಗಲಿದ್ದು, ಇಂಡಿಯಾ ರೆಡ್, ಇಂಡಿಯಾ ಬ್ಲೂ ಹಾಗೂ ಇಂಡಿಯಾ ಗ್ರೀನ್ ತಂಡಗಳು ಪ್ರಶಸ್ತಿಗಾಗಿ ಕಾದಾಡಲಿವೆ.