ಗಂಭೀರ್, 2019 ಜನವರಿ 24 ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಗೃಹ ನಿರ್ಮಾಣ ಯೋಜನೆಗಾಗಿ 2011ರಲ್ಲಿ ಆಸಕ್ತರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಈ ಯೋಜನೆ ಆರಂಭವಾಗಿರಲಿಲ್ಲ. ಹೀಗಾಗಿ ಕಂಪೆನಿ ವಿರುದ್ಧ 2016ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ನವದೆಹಲಿ: ವಂಚನೆ ಪ್ರಕರಣವೊಂದರಲ್ಲಿ ಭಾರತದ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್‌ಗೆ ಇಲ್ಲಿ ಸ್ಥಳೀಯ ನ್ಯಾಯಾಲಯ ಜಾಮೀನು ಸಹಿತ ವಾರಂಟ್ ಹೊರಡಿಸಿದೆ. 

ಡೆಲ್ಲಿ ,ಕೆಕೆಆರ್ ಬಳಿಕ ಹೊಸ ತಂಡದತ್ತ ಗೌತಮ್ ಗಂಭೀರ್?

ಗಂಭೀರ್ ಪ್ರಚಾರ ರಾಯಭಾರಿಯಾಗಿದ್ದ ರಿಯಲ್ ಎಸ್ಟೇಟ್ ಸಮೂಹ ರುದ್ರ ಬಿಲ್ಡ್‌ವೆಲ್ ಯೋಜನೆಯ ವಿರುದ್ಧ ವಂಚನೆ, ದುರುಪಯೋಗ ಮತ್ತು ಸಂಚು ರೂಪಿಸಿದ್ದ ಆರೋಪ ದಾಖಲಿಸಲಾಗಿತ್ತು. ಈ ಸಂಬಂಧ ಗಂಭೀರ್ ಕೋರ್ಟ್‌ಗೆ ಹಾಜರಾಗಬೇಕಿತ್ತು. ಆದರೆ ಗಂಭೀರ್ ವಿಚಾರಣೆಗೆ ನಿರಂತರವಾಗಿ ಹಾಜರಾಗದೆ ಇದ್ದಿದ್ದರಿಂದ ಅವರಿಗೆ ವಾರಂಟ್ ನೀಡಲಾಗಿದೆ.

ಧೋನಿ ನಾಯಕತ್ವ ವಿರುದ್ಧ ಗುಡುಗಿದ ಗಂಭೀರ್!

ಗಂಭೀರ್, 2019 ಜನವರಿ 24 ರಂದು ನ್ಯಾಯಾಲಯದ ಮುಂದೆ ಹಾಜರಾಗಬೇಕಿದೆ. ಗೃಹ ನಿರ್ಮಾಣ ಯೋಜನೆಗಾಗಿ 2011ರಲ್ಲಿ ಆಸಕ್ತರಿಂದ ಕೋಟಿಗಟ್ಟಲೆ ಹಣ ಹೂಡಿಕೆ ಮಾಡಿಸಿಕೊಳ್ಳಲಾಗಿತ್ತು. ಈ ಯೋಜನೆ ಆರಂಭವಾಗಿರಲಿಲ್ಲ. ಹೀಗಾಗಿ ಕಂಪೆನಿ ವಿರುದ್ಧ 2016ರಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ವಿದಾಯದ ಪಂದ್ಯದಲ್ಲಿ ಸೆಂಚುರಿ ಬಾರಿಸಿದ ರಿಯಲ್ ಚಾಂಪಿಯನ್ ಗಂಭೀರ್